ಮಡಿಕೇರಿ, ಸೆ. 20: ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನೆಯ 16ನೇ ವಾರ್ಷಿಕೋತ್ಸವ ತಾ. 25 ಮತ್ತು 26 ರಂದು ನಡೆಯಲಿದೆ.

ತಾ. 25 ರಂದು ಸಂಜೆ 6 ರಿಂದ ಗುರು ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಕಲಶ ಸ್ಥಾಪನೆ, ದೀಪಾರಾಧನೆ, ಅಷ್ಠಾವಧಾನ ಸೇವೆ ಹಾಗೂ ತೀರ್ಥ ಪ್ರಸಾದ ವಿನಿಯೋಗವಾಗಲಿದೆ.

ತಾ. 26 ರಂದು ಬೆಳಿಗ್ಗೆ ಗುರುಗಣಪತಿ ಪೂಜೆ, ಪುಣ್ಯಾಹ, ಗಣಪತಿ ಹೋಮ, ಕಲಾ ಹೋಮ, ತತ್ವ ಹೋಮ, ತತ್ವ ಶಾಂತಿ ಹೋಮ, ದುರ್ಗಾ ಹೋಮ, ತತ್ವಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ಮಧ್ಯಾಹ್ನ 12.30 ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಗಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.