ಮಡಿಕೇರಿ, ಸೆ. 20: ಹರದೂರು ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಮೊದಲ ಅವಧಿಯ ವಾರ್ಡ್ ಸಭೆಗಳು ಮತ್ತು ಗ್ರಾಮ ಸಭೆಯನ್ನು ಆಯಾಯ ವಾರ್ಡ್‍ನ ಸದಸ್ಯರುಗಳ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಪಿ. ಸುಮ ಅಧ್ಯಕ್ಷತೆಯಲ್ಲಿ ಮತ್ತು ನೋಡಲ್ ಅಧಿಕಾರಿ ಬೋಪಯ್ಯ ಉಪಸ್ಥಿತಿಯಲ್ಲಿ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಮತ್ತು ತಾ.ಪಂ. ಸದಸ್ಯೆ ಪಿ. ಮಣಿ ಸಮ್ಮುಖದಲ್ಲಿ ನಡೆಸಲಾಗುವದು.

ತಾ. 23 ರಂದು ಬೆಳಿಗ್ಗೆ 10.30 ಗಂಟೆಗೆ ಗರಗಂದೂರು ಬಿ ಗ್ರಾಮದ ವಾರ್ಡ್‍ಸಭೆ ಹೊಸತೋಟದ ಸಮುದಾಯ ಭವನದಲ್ಲಿ, ತಾ. 23 ರಂದು ಮಧ್ಯಾಹ್ನ 2.30 ಗಂಟೆಗೆ ಗರಗಂದೂರು ಎ ಗ್ರಾಮದ ವಾರ್ಡ್ ಸಭೆ ಮಲ್ಲಿಕಾರ್ಜುನ ಕಾಲೋನಿಯ ಸಮುದಾಯ ಭವನದಲ್ಲಿ, ತಾ. 24 ರಂದು ಬೆಳಿಗ್ಗೆ 10.30 ಗಂಟೆಗೆ ಗರಗಂದೂರು ಎ ಗ್ರಾಮದ ವಾರ್ಡ್ ಸಭೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ, ತಾ. 24 ರಂದು ಮಧ್ಯಾಹ್ನ 2.30 ಗಂಟೆಗೆ ಹರದೂರು ಗ್ರಾಮದ ವಾರ್ಡ್ ಸಭೆ ಹರದೂರಿನ ಹಳೇ ಪಂಚಾಯಿತಿ ಕಚೇರಿ ಕಟ್ಟಡದಲ್ಲಿ, ತಾ. 24 ರಂದು ಸಂಜೆ 4 ಗಂಟೆಗೆ ಅಂಜನಗೇರಿ ಬೆಟ್ಟಗೇರಿ ಗ್ರಾಮದ ವಾರ್ಡ್ ಸಭೆ ಬೆಟ್ಟಗೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಗ್ರಾಮಸಭೆ: ಗರಗಂದೂರು ಗ್ರಾಮಸಭೆ ತಾ. 26 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.