ಮಡಿಕೇರಿ, ಸೆ. 20: ಮಡಿಕೇರಿ ತಾಲೂಕು ಅಂತರಕಾಲೇಜುಗಳ ಪ.ಪೂ. ವಿದ್ಯಾರ್ಥಿಗಳಿಗೆ ತಾ. 21 ರಿಂದ (ಇಂದಿನಿಂದ) ತಾ. 23ರ ತನಕ ಕ್ರೀಡಾಕೂಟ ಏರ್ಪಡಿಸಲಾಗಿದೆ. ರಾಜರಾಜೇಶ್ವರಿ ಪ.ಪೂ. ಕಾಲೇಜಿನಲ್ಲಿ ಕ್ರೀಡಾಕೂಡ ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿದೆ. ತಾ. 22 ಗುಡ್ಡಗಾಡು ಓಟ, ತಾ. 23 ರಂದು ಮ್ಯಾನ್ಸ್ ಕಾಂಪೌಂಡ್‍ನಲ್ಲಿ ಅಥ್ಲೆಟಿಕ್ ಪಂದ್ಯಾಟಗಳು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ. ತಾ. 23 ರಂದು ಸಮಾರೋಪ ಅಪರಾಹ್ನ 3.30ಕ್ಕೆ ಜರುಗಲಿದೆ.