ಸುಂಟಿಕೊಪ್ಪ,s ಸೆ. 20: ಕೊಡಗು ಗೌಡ ನಿವೃತ ನೌಕರರ ಸಂಘದ ಸದಸ್ಯರಿಗೆ ಮತ್ತು ಅವರ ಮಕ್ಕಳಿಗೆ 2018-19 ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಆದ್ಯತೆಯ ಮೇರೆಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನವನ್ನು ಏರ್ಪಡಿಸಲಾಗಿದೆ.

ಆಸಕ್ತರು ತಮ್ಮ ಸಾಧನೆಯ ಪ್ರತಿಯನ್ನು ಇದೇ ಅಕ್ಟೋಬರ್ ತಿಂಗಳ 10ನೇ ತಾರೀಕಿನೊಳಗೆ ಮಡಿಕೇರಿ ಕೊಡಗು ಗೌಡ ನಿವೃತ ನೌಕರರ ಸಂಘದ ಕಛೇರಿ ಇಲ್ಲಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕಳುಹಿಸ ಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವದಿಲ್ಲ. ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9663725152 ಸಂಪರ್ಕಿಸಲು ಕೋರಲಾಗಿದೆ ಎಂದು ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.