ಮಡಿಕೇರಿ, ಸೆ. 20: ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಹುಟ್ಟುಹಬ್ಬವನ್ನು ಜಿಲ್ಲೆಯಾದ್ಯಂತ ಬಿ.ಜೆ.ಪಿ. ಪಕ್ಷ ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ವಿವಿಧ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.ನಾಪೆÇೀಕ್ಲು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಹುಟ್ಟು ಹಬ್ಬದ ಹಿನ್ನೆಲೆ ನಾಪೆÇೀಕ್ಲು ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಸ್ಥಳೀಯ ಆರೋಗ್ಯ ಸಮುದಾಯ ಕೇಂದ್ರದ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ನಂತರ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ಆಸ್ಪತ್ರೆ ಗೇಟ್ ಬಳಿ ಸಸಿನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ನಾಪೆÇೀಕ್ಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಸದಸ್ಯರಾದ ನೆರೆಯಂಡಮ್ಮಂಡ ಉಮಾಪ್ರಭು, ಕೋಡಿಯಂಡ ಇಂದಿರಾ ಹರೀಶ್, ಮುಂಖಂಡರಾದ ಕೇಟೋಳಿರ ಹರೀಶ್ ಪೂವಯ್ಯ, ಪಾಡಿಯಮ್ಮಂಡ ಮನು ಮಹೇಶ್, ಕೇಲೇಟಿರ ಸಾಬು ನಾಣಯ್ಯ, ಶಿವಚಾಳಿಯಂಡ ಜಗದೀಶ್, ಕಿಶೋರ್ ಬೋಪಣ್ಣ, ಚೋಕಿರ ಪ್ರಭು ಪೂವಪ್ಪ, ಸಜಿತ್, ಕುಟ್ಟಂಜೆಟ್ಟಿರ ಪೂಣಚ್ಚ, ಸುಕುಮಾರ, ಚೀಯಕಪೂವಂಡ ಸತೀಶ್, ಆರ್‍ಎಸ್‍ಎಸ್ ಮುಖಂಡ ಕಂಗಾಂಡ ಜಾಲಿ ಪೂವಪ್ಪ, ಆಸ್ಪತ್ರೆಯ ವೈದ್ಯರಾದ ಪೂವಯ್ಯ, ಆಡಳಿತಾಧಿಕಾರಿ ಮದುಸೂದನ್, ಸಿಬ್ಬಂದಿ ಮತ್ತಿತರರಿದ್ದರು.ವೀರಾಜಪೇಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಸಮಿತಿಯ ಸೇವಾ ಸಪ್ತಾದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ಹಂಚಿ ಅವರ ಆರೋಗ್ಯವನ್ನು ವಿಚಾರಿಸಿದರು.

ಹಣ್ಣು-ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸದಸ್ಯ ಬಿ.ಎಂ. ಗಣೇಶ್, ತಾಲೂಕು ಬಿಜೆಪಿ ಸಮಿತಿ ಅಧ್ಯಕ್ಷ ಅರುಣ್ ಭೀಮಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಹರ್ಷವರ್ಧನ್, ಜೂನಾ ಹಾಗೂ ಪಕ್ಷದ ಮುಖಂಡರಾದ ಮಲ್ಲಂಡ ಮಧು ದೇವಯ್ಯ, ಕೆ. ಗಿರೀಶ್ ಗಣಪತಿ, ಮಧೋಶ್ ಪೂವಯ್ಯ, ಇ.ಸಿ. ಜೀವನ್, ಮಾಣಿರ ಉಮೇಶ್, ಜೋಕಿಂ ರಾಡ್ರಿಗಸ್, ವಿಷ್ಣು ಇತರರು ಉಪಸ್ಥಿತರಿದ್ದರು.ಸಂಪಾಜೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಸಂಪಾಜೆ ಗ್ರಾಮದ ಅರಮನೆ ತೋಟ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್ ಉದ್ಘಾಟಿಸಿ ಸ್ವಚ್ಛತೆಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಪಾಜೆ ಅಂಗನವಾಡಿ ಕಾರ್ಯಕರ್ತೆ ಪ್ರಮಿಳಾ ಕುಕ್ಕೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಕಾರ್ಯಕರ್ತೆ ಪುಷ್ಪಾ, ಆಶಾ ಕಾರ್ಯಕರ್ತೆ ಸಾವಿತ್ರಿ, ಕೊರಗಪ್ಪ, ತಿಲಕ್, ಕೃಷ್ಣ, ರಾಜೇಶ್ ಆಟೋ, ಶಶಿ, ಚಿನ್ನಮ್ಮ, ಕುಸುಮ ಮತ್ತಿತರರು ಭಾಗಿಯಾದರು. ಸಂಪಾಜೆ ಮುಖ್ಯರಸ್ತೆಯಿಂದ ಆಸ್ಪತ್ರೆ ಭಾಗ ಹಾಗೂ ಅರಮನೆ ತೋಟ ಪರಿಸರವನ್ನು ಶುಚಿಗೊಳಿಸಲಾಯಿತು. - ಶಭರೀಶ್ ಕುದ್ಕುಳಿಭಾಗಮಂಡಲ: ಭಗಂಡೇಶ್ವರ ರೈತ ಉತ್ಪಾದಕರ ಸಂಘದ ಅಧೀನದಲ್ಲಿ ಬರುವ ಕೋರಂಗಾಲ ಗ್ರಾಮದ ರೈತ ಸಂಘದ 3ನೇ ವಾರ್ಷಿಕೋತ್ಸವದೊಂದಿಗೆ ಪ್ರಧಾನಿ ನರೆಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭ ಕಳೆದ ಆಗಸ್ಟ್ 9 ರಂದು ಐದು ಜನರನ್ನು ಜೀವದ ಹಂಗು ತೊರೆದು ರಕ್ಷಿಸಿದ ಸಂಘದ ಸದಸ್ಯರಾದ ಕಾಳನ ರವಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಂತರ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಮಾದಾಪಟ್ಟಣದ ಸರಕಾರಿ ಶಾಲಾ ಆವರಣದಲ್ಲಿ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಶಾಲಾ ಆವರಣವನ್ನು ಶುಚಿಗೊಳಿಸಿ, ಶಾಲಾ ಆವರಣದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಗುಡ್ಡೆಹೊಸೂರು ಗ್ರಾ.ಪಂ. ಸದಸ್ಯರಾದ ಪ್ರವೀಣ್, ಪುಷ್ಪ, ಮತ್ತು ಅಲ್ಲಿನ ಬಿ.ಜೆ.ಪಿ. ಬೂತ್ ಅಧ್ಯಕ್ಷ ಸುರೇಶ್ ಹಾಗೂ ಪಕ್ಷದ ಮುಖಂಡರಾದ ವಿಜಯನ್, ಉಜ್ವಲ್, ವಿನೋದ್, ಚಂದ್ರು, ಶೇಖರ್ ಮತ್ತು ಶಾಲಾ ಮುಖ್ಯ ಶಿಕ್ಷಕಿ ದೇವಮ್ಮ ಮತ್ತು ಸಹ ಶಿಕ್ಷಕ ವೃಂದದವರು ಹಾಜರಿದ್ದರು. ಈ ಸಂದರ್ಭ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.