ವೀರಾಜಪೇಟೆ, ಸೆ. 20: ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಾದ ಬಿ.ಎಸ್ ಶ್ರೀಧರ್ ಹಾಗೂ ಬಿ.ಜಿ. ಮಹೇಶ್ ಇಂದು ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಕುಂದುಕೊರತೆ ಹಾಗೂ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ. ಪೃಥ್ವಿನಾಥ್ ಮೌಖಿಕವಾಗಿ ದೂರು ನೀಡಿ ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಠಾಚಾರ ತಾಂಡವವಾಡುತ್ತಿದ್ದು, ಇಬ್ಬರು ಅಧಿಕಾರಿಗಳು ಸಾರ್ವಜನಿ ಕರನ್ನು ಸತಾಯಿಸುತ್ತಿದ್ದಾರೆ. ಈ ಕುರಿತು ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು. ಇದೇ ಸಂದರ್ಭ ಅಧಿಕಾರಿ ಬಿ.ಎಸ್. ಶ್ರೀಧರ್ ಮಾತನಾಡಿ ಸರ್ಕಾರಿ ಭ್ರಷ್ಟಾಚಾರ ನಿಗ್ರಹ ದಳ ಕಚೇರಿ ಪ್ರಾರಂಭಗೊಂಡು 18 ತಿಂಗಳಾಗಿದೆ. ಅಧಿಕಾರಿಗಳು ಇಲ್ಲದ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಸರ್ಕಾರ ಅಧಿಕಾರಿಗಳನ್ನು ನಿಯೋಜಿಸಿದ್ದು, ಯಾವದೇ ಸರ್ಕಾರಿ ನೌಕರ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದಲ್ಲಿ, ನಿರ್ಲಕ್ಷ್ಯತೆ ತೋರಿದಲ್ಲಿ ಅಥವಾ ಲಂಚ ಕೇಳಿದಲ್ಲಿ ಕೊಡಗು ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳ, ಅಥವಾ ದಕ್ಷಿಣ ವಲಯ ಮ್ಯೆಸೂರು ಇವರಲ್ಲಿ ಮೌಖಿಕÀ ಹಾಗೂ ಲಿಖಿತ ದೂರು ನೀಡಬಹುದು ಎಂದು ಹೇಳಿದರು. ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರುಗಳನ್ನು ಲಿಖಿತವಾಗಿಯೇ ನೀಡಬೇಕೆಂದು ಅಧಿಕಾರಿ ಸೂಚಿಸಿದರು. ಆರ್ಜಿ ಗ್ರಾಮದ ಯೋಧ ಅಯ್ಯಣ್ಣ ಸೇರಿದಂತೆ ಹಲವರು ಸಾರ್ವಜನಿಕರ ಪರ ಅಹವಾಲು ಹೇಳಿಕೊಂಡರು.