ಕುಶಾಲನಗರ, ಸೆ. 20: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಡಿಯಲ್ಲಿ ಓಡಿಪಿಯ ಸಹಯೋಗದೊಂದಿಗೆ ಕುಶಾಲನಗರದಲ್ಲಿ ಮಹಿಳಾ ಸಾಂತ್ವನ ಕೇಂದ್ರ ಆರಂಭಿಸಲಾಗಿದೆ. ಕೌಟುಂಬಿಕ ಹಿಂಸೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಈ ಬಗ್ಗೆ ಸಲಹಾ ಮಾರ್ಗದರ್ಶನ, ಕಾನೂನು ನೆರವು ಮತ್ತಿತರ ಸಮಸ್ಯೆಗಳಿಗೆ ಸಹಾಯ ಕೋರಿ ಬಂದ ಮಹಿಳೆಯರಿಗೆ ಪ್ರಕರಣದ ತೀವ್ರತೆಗೆ ಅನುಗುಣವಾಗಿ ಸೇವಾ ಸೌಲಭ್ಯಗಳನ್ನು ಒದಗಿಸಲಾಗುವದು. ಆಶ್ರಯ, ಸಮಾಲೋಚನೆ, ಕಾನೂನಿನ ನೆರವು ನೀಡುವ ಮುಖಾಂತರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವದು.

ನೊಂದ ಮಹಿಳೆಯರು ಸಹಾಯಕ್ಕಾಗಿ ಗುಮ್ಮನಕೊಲ್ಲಿಯಲ್ಲಿರುವ ಕಛೇರಿ ದೂರವಾಣಿ ಸಂಖ್ಯೆ 08276-272195 ಅಥವಾ ಮಹಿಳಾ ಸಹಾಯವಾಣಿ 1091 ಸಂಪರ್ಕಿಸಬಹುದು ಎಂದು ಓಡಿಪಿ ಸಾಂತ್ವನ ಸಲಹಾ ಕೇಂದ್ರದ ಪ್ರಕಟಣೆ ತಿಳಿಸಿದೆ.