ಮಡಿಕೇರಿ. ಸೆ. 20: ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಸಂಪÀÇರ್ಣವಾಗಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸುವದಾಗಿ ಜಾತ್ಯತೀತ ಜನತಾದಳದ ನಗರ ಮಹಿಳಾ ಘಟಕ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಮಾಜಿ ಸದಸ್ಯೆ ಲೀಲಾ ಶೇಷಮ್ಮ ನಗರದÀ ರಸ್ತೆ, ಚರಂಡಿಗಳ ದುರಸ್ತಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಒಂದು ವಾರದ ಗಡುವು ನೀಡುವದಾಗಿ ತಿಳಿಸಿದರು. ನಗರದ ಮುಖ್ಯ ರಸ್ತೆ, ಬಸ್‍ನಿಲ್ದಾಣದ ಬಳಿ, ಕಾವೇರಿ ಲೇಔಟ್ ಸೇರಿದಂತೆ ಹಲವೆಡೆಗಳಲ್ಲಿ ರಸ್ತೆಗಳು ಗುಂಡಿ ಬಿದ್ದು ವಾಹನ ಸಂಚಾರ ಸೇರಿದಂತೆ ಜನರು ನಡೆದಾಡಲು ಸಾಧ್ಯವಾಗದ ದುಸ್ಥಿತಿ ಎದುರಾಗಿದೆ. ಪ್ರಸ್ತುತ ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದಿರುವದರಿಂದ ಪೌರಾಯುಕ್ತರು ನಗರದ ಮೂಲಭೂತ ಸಮಸ್ಯೆಗಳ ಬಗ್ಗೆ ಖುದ್ದು ಬಡಾವಣೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಆದರೆ, ಈ ಬಗ್ಗೆ ಅವರಿಗೆ ಕಾಳಜಿ ಇಲ್ಲವೆಂದು ಆರೋಪಿಸಿದರು.

ಈ ಹಿಂದೆಯೇ ರಾಣಿಪೇಟೆ ಯಿಂದ ಮುತ್ತಪ್ಪ ದೇವಸ್ಥಾನದ ವರೆಗಿನ 80 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಅನುಮೋದನೆ ದೊರಕಿದ್ದರೂ ಇಲ್ಲಿಯವರೆಗೂ ಕಾಮಗಾರಿ ನಡೆಸುವ ವರ್ಕ್ ಆರ್ಡರ್ ನೀಡಿಲ್ಲ. ನಗರದ ಬಹುತೇಕ ಎಲ್ಲಾ ವಾರ್ಡ್ ಗಳಲ್ಲಿಯೂ ರಸ್ತೆಗಳು ಹದಗೆಟ್ಟಿದ್ದರು ಅದರ ದುರಸ್ತಿಯತ್ತ ಲಕ್ಷ್ಯ ವಹಿಸುತ್ತಿಲ್ಲವೆಂದು ಹೇಳಿದರು.

ಕಾವೇರಿ ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹೀಗಿದ್ದೂ ಅದನ್ನು ಬಗೆಹರಿಸುವ ನಿಟ್ಟಿನ ಪ್ರಯತ್ನ ನಗರಸಭೆÉಯಿಂದ ನಡೆದಿಲ್ಲ. ಪ್ರಸ್ತುತ ನಗರದ ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳು ಸಮರ್ಪಕವಾಗಿ ಉರಿಯದೆ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನಹರಿಸಿ ವಾರದ ಒಳಗೆ ಕ್ರಮ ಕೈಗೊಳ್ಳಬೇಕೆಂದು ಲೀಲಾಶೇಷಮ್ಮ ಒತ್ತಾಯಿಸಿದರು.

ಜೆಡಿಎಸ್ ಮಹಿಳಾ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಜೆಸಿಂತಾ ಹೂವಲ್ಲಿ ಮಾತನಾಡಿ, ನಗರದ ಎವಿ ಶಾಲೆಯ ಬಳಿ ಈ ಹಿಂದೆ ದನದ ದೊಡ್ಡಿ ಇದ್ದಿತ್ತಾದರು, ಪ್ರಸ್ತುತ ಅಲ್ಲಿ ದೊಡ್ಡಿ ಇಲ್ಲ. ನಗರ ವ್ಯಾಪ್ತಿಯ ಮುಖ್ಯ ರಸ್ತೆÀಗಳಲ್ಲಿ ಮನಬಂದಂತೆ ಅಡ್ಡಾಡುವ ದನಗಳನ್ನು ಕೂಡಿಹಾಕುವ ಸಲುವಾಗಿ ದನದ ದೊಡ್ಡಿಯೊಂದರ ಅವಶ್ಯಕತೆ ಇದ್ದು, ಈ ಬಗ್ಗೆ ನಗರಸಭೆ ಗಮನಿಸಬೇಕು. ಇದರೊಂದಿಗೆ ಬೀದಿ ನಾಯಿಗಳ ಉಪಟಳ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದಾ ಸೈಲಾಸ್, ಉಪಾಧ್ಯಕ್ಷೆ ಮಮತಾ, ಎಲ್.ಸಿ.ಬೇಬಿ ಹಾಗೂ ಕುಸುಮ ಉತ್ತಯ್ಯ ಉಪಸ್ಥಿತರಿದ್ದರು.