ನಾಪೆÉÇೀಕ್ಲು, ಸೆ. 20: ನಾಪೆÉÇೀಕ್ಲು ಕೃಷಿ ಪತ್ತಿನ ಸಹಕಾರ ಸಂಘವು 2018-19 ನೇ ಸಾಲಿನಲ್ಲಿ 31 ಲಕ್ಷ 32 ಸಾವಿರ 993 ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಹೇಳಿದರು. ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಸಾಲಿನಲ್ಲಿ ಸಂಘದಲ್ಲಿ 2442 ಸದಸ್ಯರಿದ್ದಾರೆ. ಸಂಘವು 1,04,43,771 ರೂ. ಪಾಲು ಬಂಡವಾಳವನ್ನು ಹೊಂದಿದೆ. ಸಂಘವು 23,46,59,194 ರೂ. ಠೇವಣಿಯನ್ನು ಹೊಂದಿದೆ. 23,13,18,8448 ರೂ. ಗಳನ್ನು ಸಂಘವು ಸದಸ್ಯರಿಗೆ ಸಾಲ ನೀಡಿದೆ ಎಂದರು. ಸದಸ್ಯರಿಗೆ ಕೃಷಿ ಸಾಲವಾಗಿ ಗರಿಷ್ಠ 3 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿದ್ದು, ಮಧ್ಯಮಾವಧಿ ಸಾ¯ವಾಗಿ ಕೆರೆ ನಿರ್ಮಿಸಲು 60 ಸಾವಿರ ಮತ್ತು ಹೂಳೆತ್ತಲು 30 ಸಾವಿರ, ಗೋದಾಮು ನಿರ್ಮಿಸಲು ಗರಿಷ್ಠ 5 ಲಕ್ಷ ರೂ. ಅಂದರೆ ಏಕ್ರೆಗೆ 50 ಸಾವಿರದಂತೆ, ಕಾಂಕ್ರೀಟ್ ಕಣ ನಿರ್ಮಾಣಕ್ಕೆ 5ಲಕ್ಷ ರೂ. ಮತ್ತು ಕೃಷಿ ಯಂತ್ರೋಪಕರಣಕ್ಕೆ ರೂ. 8 ಲಕ್ಷವರೆಗೆ ಸಾಲ ನೀಡಲಾಗುವದು ಎಂದರು. ಅಲ್ಲದೆ ಕೃಷಿಯೇತರ ವಾಹನ ಸಾಲ 8 ಲಕ್ಷ ರೂ. ಜಾಮೀನು ಸಾಲ 15 ಸಾವಿರ ದಿಂದ 25 ಸಾವಿರ ರೂ. ಚಿನ್ನ ಗ್ರಾಂ.ಗೆ 2 ಸಾವಿರ ರೂ. ಸ್ವಸಹಾಯ ಗುಂಪುಗಳಿಗೆ 3 ಲಕ್ಷ ರೂ. ಮತ್ತು ಯು.ಪಿ.ಎಸ್. ಸೋಲಾರ್ ಕೊಳ್ಳಲು ಶೇ. 80 ರಷ್ಟು ಸಾಲವನ್ನು ನೀಡಲಾಗುವದು ಎಂದು ತಿಳಿಸಿದರು. ಅದರಂತೆ ಸಂಘದಲ್ಲಿ 1408 ಜನ ಸದಸ್ಯರು ಮರಣ ನಿಧಿಯನ್ನು ಹೊಂದಿದ್ದು, ಪೂರ್ಣ ಪ್ರಮಾಣ ಅಂದರೆ ಒಂದು ಸಾವಿರ ರೂ. ಮರಣ ನಿಧಿ ಹೊಂದಿದವರಿಗೆ ರೂ 10 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ ಎಂದರು. ಸಂಘದ ವಾಣಿಜ್ಯ ಮಳಿಗೆಯನ್ನು ಬಾಡಿಗೆ ನೀಡಲಾಗಿದ್ದು ಒಟ್ಟು 60,500 ರೂ. ಬಾಡಿಗೆ ಬರುತ್ತಿದೆ ಎಂದು ತಿಳಿಸಿದ ಅವರು ಸಂಘದ ನೂತನ ಕಟ್ಟಡಕ್ಕಾಗಿ ಒಟ್ಟು 1,10,07,926 ರೂ. ವೆಚ್ಚವಾಗಿದ್ದು, ಸರ್ವ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು. ರಾಜ್ಯ ಸರಕಾರದ ಒಂದು ಲಕ್ಷ ಸಾಲ ಮನ್ನಾ ಯೋಜನೆಯಿಂದ ಸಂಘದ 340 ಜನರು ಸೌಲಭ್ಯವನ್ನು ಪಡೆದುಕೊಂಡಿದ್ದು ಇನ್ನು ಸುಮಾರು 220 ಜನರು ಇದರ ಸೌಲಭ್ಯವನ್ನು ಹೊಂದಲಿದ್ದಾರೆ ಎಂದರು. ಸಂಘವು 2018-19 ರ ಸಾಲಿನಲ್ಲಿ ಮಡಿಕೇರಿ ತಾಲೂಕಿನಲ್ಲಿ ಉತ್ತಮ ಸಂಘ ಪ್ರಶಸ್ತಿಯನ್ನು ಅಪೆಕ್ಸ್ ಬ್ಯಾಂಕ್‍ನಿಂದ ಪಡೆದುಕೊಂಡಿದ್ದು ಇದಕ್ಕೆ ಸರ್ವ ಸದಸ್ಯರ ಸಹಕಾರವೇ ಕಾರಣ ಎಂದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಕೇಲೇಟಿರ ಮಾಲಾ ಬೋಪಯ್ಯ, ನಿರ್ದೇಶಕರಾದ ಎನ್.ಎಸ್. ಉದಯ ಶಂಕರ್, ಅರೆಯಡ ಅಶೋಕ, ಕಾಂಡಂಡ ಜಯ ಕರುಂಬಯ್ಯ, ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಚೋಕಿರ ಪ್ರಭು ಪೂವಪ್ಪ, ಚೀಯಕಪೂವಂಡ ಸತೀಶ್ ದೇವಯ್ಯ, ಕುಂದೈರೀರ ಕಿರಣ್, ಹೆಚ್.ಎ. ಬೊಳ್ಳು, ಎನ್.ಎ. ಕೃಷ್ಣಪ್ಪ, ಕುಂಡ್ಯೋಳಂಡ ಕವಿತ ಮುತ್ತಣ್ಣ, ಬಿದ್ದಾಟಂಡ ರಾಧ ಗಣಪತಿ, ಮುಖ್ಯ ಕಾರ್ಯನಿರ್ವಾ ಹಣಧಿಕಾರಿ ಶಿವಚಾಳಿಯಂಡ ವಿಜೂ, ಪೂಣಚ್ಚ. ಇದ್ದರು.