ಮಡಿಕೇರಿ, ಸೆ. 20: ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕಿನ 2018-2019ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 23ರಂದು ಪೂರ್ವಾಹ್ನ 11 ಗಂಟೆಗೆ ಬ್ಯಾಂಕಿನ ಅಧ್ಯಕ್ಷೆ ಪ್ರೇಮ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೆಳಗಿನ ಕೊಡವ ಸಮಾಜದಲ್ಲಿ ನಡೆಯಲಿದೆಯೆಂದು ವ್ಯವಸ್ಥಾಪಕಿ ಬಿ.ಪಿ. ಶೈಲಿ ತಿಳಿಸಿದ್ದಾರೆ.