ವೀರಾಜಪೇಟೆ, ಸೆ. 20: ವೀರಾಜಪೇಟೆ ಟೌನ್‍ಬ್ಯಾಂಕ್‍ಗೆ 2018-19ನೇ ಸಾಲಿನಲ್ಲಿ ಒಟ್ಟು ರೂ 32,34,363 ನಿವ್ವಳ ಲಾಭ ಬಂದಿದ್ದು ಬ್ಯಾಂಕ್ ಪ್ರಗತಿ ಪಥದಲ್ಲಿ ಮುಂದುವರೆಯುತ್ತಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಕರ್ನಂಡ ರಘು ಸೋಮಯ್ಯ ತಿಳಿಸಿದ್ದಾರೆ.

ವೀರಾಜಪೇಟೆ ಟೌನ್‍ಬ್ಯಾಂಕ್ ವತಿಯಿಂದ ಇಲ್ಲಿನ ಪ್ರೆಸ್ ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೋಮಯ್ಯ ಅವರು, ಬ್ಯಾಂಕ್ ಒಟ್ಟು 4203 ಸದಸ್ಯರುಗಳನ್ನು ಹಾಗೂ 1,83,25,430 ಪಾಲು ಬಂಡವಾಳವನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಠೇವಣಾತಿಯ ಮೊತ್ತ ರೂ. 42,69,22,892 ಆಗಿದ್ದು ಪ್ರಸಕ್ತ ಸಾಲಿನಲ್ಲಿ ರೂ. 19,74,96,308 ಸಾಲ ವಿತರಿಸಿದ್ದು, ಶೇ. 87 ರಷ್ಟು ಸಾಲ ವಸೂಲಾತಿಯಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ಬ್ಯಾಂಕ್ ‘ಬಿ’ ವರ್ಗದಲ್ಲಿದ್ದು, ಆದಾಯ ತೆರಿಗೆ ರೂ. 14,90,740 ಪಾವತಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಎಂ. ಚರ್ಮಣ ನಿರ್ದೇಶಕರುಗಳಾದ ಕೆ.ಡಬ್ಲ್ಯು. ಬೋಪಯ್ಯ, ಎಂ.ಎಂ. ನಂಜಪ್ಪ, ಕೆ.ಬಿ. ಪ್ರತಾಪ್, ಪಿ.ಎಂ. ರಚನ್, ಎಂ.ಪಿ. ಕಾವೇರಪ್ಪ, ಎಂ.ಎನ್. ಪೂಣಚ್ಚ, ವಿ.ಪಿ. ರಮೇಶ್, ಎಸ್.ಪಿ. ಜುಬಿನ, ಹೆಚ್.ಸಿ. ಮುತ್ತಮ್ಮ, ಐ.ಎಂ. ಕಾವೇರಮ್ಮ, ಡಿ.ಎಂ. ರಾಜ್‍ಕುಮಾರ್, ಪಿ.ಕೆ. ಅಬ್ದುಲ್ ರೆಹಮಾನ್ ಹಾಗೂ ವ್ಯವಸ್ಥಾಪಕ ಸಿ.ಎಸ್. ಪ್ರಕಾಶ್ ಹಾಜರಿದ್ದರು.