ಮಡಿಕೇರಿ. ಸೆ. 24: ಮಡಿಕೇರಿ ರೋಟರಿ ವತಿಯಿಂದ ರಾಜರಾಜೇಶ್ವರಿ ಪಿಯು ಕಾಲೇಜಿನಲ್ಲಿ ಇಂಟರ್ಯಾಕ್ಟ್ ಪದಗ್ರಹಣ ನೆರವೇರಿತು.
ನೂತನ ಅಧ್ಯಕ್ಷ ಪಿ.ಜೆ. ಸಾಗರ್ ಮತ್ತು ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ರೋಟರಿ ಅಧ್ಯಕ್ಷ ಕೆ.ಎಸ್. ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ಮಾಜಿ ಅಧ್ಯಕ್ಷ ಡಿ.ಎಂ. ಕಿರಣ್, ಸವಿತಾಭಟ್, ಅನಿಲ್ ಕೃಷ್ಣಾನಿ ಹಾಜರಿದ್ದರು.