ಗೋಣಿಕೊಪ್ಪ ವರದಿ, ಸೆ. 24: ಕೊಡವ, ಅಮ್ಮಕೊಡವ ಜನಾಂಗ ಒಂದಾಗಿ ಪಾಲ್ಗೊಳ್ಳುವ 7 ನೇ ವರ್ಷದ ಕೊಡವ, ಅಮ್ಮಕೊಡವ ವಾಲಿಬಾಲ್ ಕಪ್ ಅಕ್ಟೋಬರ್ 11 ರಿಂದ 13 ರವರೆಗೆ ಮಾಯಮುಡಿ ಗ್ರಾಮದ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ನಡೆಯಲಿದೆ ಎಂದು ಮಾನಿಲ್ ಅಯ್ಯಪ್ಪ ಕೊಡವ ಕೂಟ ಸಂಚಾಲಕ ಸಣ್ಣುವಂಡ ರಮೇಶ್ ತಿಳಿಸಿದ್ದಾರೆ.
ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಯುವಕ ಸಂಘ ಮತ್ತು ಕೊಡವ ಕೂಟ ಸಹಯೋಗದಲ್ಲಿ 3 ದಿನ ಟೂರ್ನಿ ನಡೆಯಲಿದೆ. ಇದರೊಂದಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ಪುರುಷ ಹಾಗೂ ಮಹಿಳೆಯರಿಗೆ ವಾಲಗತ್ತಾಟ್ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಂಡದ ನೋಂದಣಿಗೆ ಅಕ್ಟೋಬರ್ 3 ಕೊನೆಯ ದಿನಾಂಕವಾಗಿದ್ದು, 6 ಆಟಗಾರರು ಪಾಲ್ಗೊಳ್ಳಬಹುದಾಗಿದೆ. 25 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರಥಮ, ದ್ವಿತೀಯ ತಂಡಗಳಿಗೆ ಆಕರ್ಷಕ ಟ್ರೋಫಿ, ನಗದು ನೀಡಲಾಗುವದು ಎಂದರು.
ಅಕ್ಟೋಬರ್ 13 ರಂದು ನಡೆಯುವ ಸಮಾರೋಪ ದಿನದಂದು ಕೈಲ್ಪೊಳ್ದ್ ಊಟೋಪಚಾರ ನಡೆಯಲಿದೆ. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ಪುರುಷ ಹಾಗೂ ಮಹಿಳೆಯರಿಗೆ ವಾಲಗತ್ತಾಟ್ ಸ್ಪರ್ಧೆ ನಡೆಯಲಿದೆ. ಕೊಡವ ಉಡುಪು ಧರಿಸಿರುವವರಿಗೆ ವಿಶೇಷ ಆಧ್ಯತೆ ನೀಡಲಾಗುವದು. ಹೆಚ್ಚಿನ ಮಾಹಿತಿಗೆ 9986421952, 9449334820 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಉಪಾಧ್ಯಕ್ಷ ಆಪಟ್ಟಿರ ಪ್ರದೀಪ್, ಕಾರ್ಯದರ್ಶಿ ಬಲ್ಯಂಡ ರವಿ, ಯುವಕ ಸಂಘ ಸದಸ್ಯರಾದ ಮಾಣಿಪಂಡ ಸುರೇಶ್, ಚೆಪ್ಪುಡೀರ ಮದು ಅಪ್ಪಣ್ಣ ಉಪಸ್ಥಿತರಿದ್ದರು.