ಮಡಿಕೇರಿ, ಸೆ.24: ಅಹಿಂಸಾ ಆಂದೋಲನ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳು ಎಲ್ಲೆಡೆ ಪಸರಿಸುವಂತಾಗಬೇಕು ಎಂದು ಸರ್ವೋದಯ ಸಮಿತಿ ಅಧ್ಯಕ್ಷÀ ಟಿ.ಪಿ.ರಮೇಶ್ ಹೇಳಿದ್ದಾರೆ.ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸರ್ವೋದಯ ಸಮಿತಿ ವತಿಯಿಂದ ಗಾಂಧೀಜಿ ವಿಚಾರಧಾರೆಯ ಕುರಿತು ಮಂಗಳವಾರ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮದ ಚಾಲನೆ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ರೂಪಿಸಿದ ಚಳುವಳಿಗಳು, ಹೋರಾಟಗಳು, ಅಹಿಂಸಾತ್ಮಕ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗಲು ಸರ್ವೋದಯ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗಾಂಧಿ ಮಂಟಪದಲ್ಲಿ ಗಾಂಧೀಜಿ ಹೊಸ ಪ್ರತಿಮೆಯನ್ನು ಸ್ಥಾಪಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಕ್ಟೋಬರ್ 2 ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವದು ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆ

(ಮೊದಲ ಪುಟದಿಂದ) ಉಪ ನಿರ್ದೇಶಕ ಕೆಂಚಪ್ಪ ಅವರು ಮಾತನಾಡಿ ಗಾಂಧೀಜಿ ಅವರು ಸ್ವಾತಂತ್ರ್ಯಕ್ಕಾಗಿ ಅಹಿಂಸೆ ಮಾರ್ಗ ಅನುಸರಿಸಿ ಇಡೀ ವಿಶ್ವವನ್ನೇ ಗೆದ್ದರು. ಆದ್ದರಿಂದ ಶಾಂತಿ, ಸಹನೆ, ತಾಳ್ಮೆ, ಅಹಿಂಸಾ ಮಾರ್ಗ ಇದ್ದಲ್ಲಿ ಯಾವದೇ ಕ್ಷೇತ್ರದಲ್ಲಿ ಗೆಲವು ಸಾಧಿಸಬಹುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ಮಾತನಾಡಿ ಗಾಂಧೀಜಿಯವರ ಬಾಲ್ಯದ ಜೀವನವನ್ನು ಸ್ಮರಿಸಿಕೊಳ್ಳಬೇಕು. ಗಾಂಧೀಜಿಯವರ ಪುಸ್ತಕಗಳನ್ನು ಅಧ್ಯಯನ ಮಾಡುವಂತಾಗಬೇಕು. ಗಾಂಧೀಜಿಯವರ ವಿಚಾರಧಾರೆ ಗಳನ್ನು ತಿಳಿದುಕೊಂಡು ಸತ್ಪ್ರಜೆಗಳಾಗಿ ಬದುಕಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಗಾಂಧೀಜಿಯವರ ಸರಳತೆ, ಸ್ವಾತಂತ್ರ್ಯಕ್ಕಾಗಿ ದುಡಿದ, ಹೋರಾಟ ಮಾಡಿದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ್ ಮಾತನಾಡಿ ಮಹಾತ್ಮ ಗಾಂಧೀಜಿ ಅವರು ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ್ದು, ಮಹಾತ್ಮ ಗಾಂಧೀಜಿಯವರ ಸಂದೇಶದಂತೆ ನಡೆದುಕೊಳ್ಳಬೇಕು ಎಂದು ನುಡಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ ನಗರದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಗಾಂಧಿ ಭವನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಸಭಾ ಭವನ, ಗ್ರಂಥಾಲಯ ಮತ್ತಿತರ ವ್ಯವಸ್ಥೆ ಒಳಗೊಂಡಿದೆ ಎಂದರು. ಸರ್ವೋದಯ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು ಇತರರು ಇದ್ದರು. ವೈಷ್ಣವ ಜನನಿ ಹಾಡನ್ನು ಲಿಯಾಕತ್ ಆಲಿ ಹಾಡಿದರು. ರೇವತಿ ರಮೇಶ್, ರಂಜಿತ್, ಮಂಜುಳ ನಿರೂಪಿಸಿದರು. ವಿಲ್‍ಫ್ರೆಡ್ ಕ್ರಾಸ್ತಾ ಸ್ವಾಗತಿಸಿದರು. ಕೋಡಿ ಚಂದ್ರಶೇಖರ್ ವಂದಿಸಿದರು.

ಸ್ಪರ್ಧೆ ವಿಜೇತರು

ಛದ್ಮವೇಷ ಸ್ಪರ್ಧೆಯಲ್ಲಿ ಲಿಟ್ಲ್ ಪ್ಲವರ್ ಶಾಲೆಯ ಜಗನ್(ಪ್ರಥಮ), ಸಂತ ಮೈಕಲರ ಶಾಲೆಯ ಎ.ಜಿ.ದಿಲನ್(ದ್ವಿತೀಯ), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮನು ಸಣ್ಣಗಿರಿ(ತೃತೀಯ). ಚಿತ್ರಕಲೆಯಲ್ಲಿ ಜನರಲ್ ತಿಮ್ಮಯ್ಯ ಶಾಲೆಯ ಆಯುಷ್ ಎನ್.ಎಚ್.(ಪ್ರಥಮ), ಸಂತ ಜೋಸೆಫರ ಶಾಲೆಯ ಆರ್.ಸಾತ್ವಿಕ್ ಅಣ್ವೇಕರ್(ದ್ವಿತೀಯ), ಜನರಲ್ ತಿಮ್ಮಯ್ಯ ಶಾಲೆಯ ದ್ರುವ ನಂಜಪ್ಪ(ತೃತೀಯ), ಪ್ರಬಂಧ ಸ್ಪರ್ಧೆಯಲ್ಲಿ ಸಂತ ಮೈಕಲರ ಪ್ರೌಢಶಾಲೆಯ ಚಿಂಚನಲಕ್ಷ್ಮೀ(ಪ್ರಥಮ), ಸಂತ ಜೋಸೆಫರ ಪ್ರೌಢ ಶಾಲೆಯ ಎ.ಆರ್.ಲಿಪಿಕ(ದ್ವಿತೀಯ), ಸಂತ ಮೈಕಲರ ಶಾಲೆಯ ಅನುಜ್ಞ ಪೂಣಚ್ಚ(ತೃತೀಯ). ಭಾಷಣ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಮೋನಿಕ(ಪ್ರಥಮ), ಸರ್ಕಾರಿ ಪದವಿ ಕಾಲೇಜಿನ ದೀಕ್ಷಿತ್ ಗೌಡ(ದ್ವಿತೀಯ), ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅದಂ ಎಂ.ವಿ(ತೃತೀಯ) ಸ್ಥಾನ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಸಮೂಹ ಗಾಯನ ದೇಶಭಕ್ತಿ ಗೀತೆ ಜನರಲ್ ತಿಮ್ಮಯ್ಯ ಶಿಕ್ಷಕರ ತಂಡ(ಪ್ರಥಮ), ಕ್ರೆಸೆಂಟ್ ಶಿಕ್ಷಕರ ತಂಡ(ದ್ವಿತೀಯ) ಹಾಗೂ ಸಂತ ಮೈಕಲರ ಶಾಲಾ ಶಿಕ್ಷಕರ ತಂಡ(ತೃತೀಯ) ಬಹುಮಾನ ಪಡೆದರು.