ಮಡಿಕೇರಿ, ಸೆ. 24: ಬಹುನಿರೀಕ್ಷಿತ ಮೈಸೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭ ಮಡಿಕೇರಿ ಹಾಗೂ ಸಂಪಾಜೆ ರಸ್ತೆ ಸಂಪರ್ಕವನ್ನು ವಿಸ್ತರಿಸುವದಿಲ್ಲವೆಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸ್ಪಷ್ಟಪಡಿಸಿದೆ.2018ರ ಪ್ರಕೃತಿ ದುರಂತದ ಬಳಿಕ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ಕೆ.ಸಿ. ಬಿದ್ದಪ್ಪ ಯಾವದೇ ಕಾರಣಕ್ಕೂ ಕುಶಾಲನಗರದಿಂದ ಸಂಪಾಜೆವರೆಗೆ ರಸ್ತೆಯನ್ನು ಈಗಿನ ದ್ವೀಪಥದಿಂದ ನಾಲ್ಕು ಪಥಕ್ಕೆ ವಿಸ್ತರಿಸಬಾರದೆಂದು ಮನವಿ ಮಾಡಿದ್ದರು. ರಸ್ತೆ ವಿಸ್ತರಣೆಯಾದರೆ ಕೊಡಗಿನ ಪ್ರಕೃತಿ ಮೇಲೆ ತೀವ್ರ ಪರಿಣಾಮ ಉಂಟಾಗ ಬಹುದೆಂದು ಅಭಿಪ್ರಾಯಪಟ್ಟರು.

ಇದಕ್ಕೆ ತಾ. 17 ರಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಮುಖ್ಯ ಇಂಜಿನಿಯರ್ ಒ.ಪಿ. ಶ್ರೀವಾಸ್ತವ ಅವರು ಉತ್ತರಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮಡಿಕೇರಿ ಹಾಗೂ ಸಂಪಾಜೆವರೆಗಿನ ದ್ವೀಪಥವನ್ನು ನಾಲ್ಕು ಪಥದ ರಸ್ತೆಯಾಗಿ ವಿಸ್ತರಿಸುವ ಯಾವದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವಿವರಿಸಿದ್ದಾರೆ.