ಸಿದ್ದಾಪುರ, ಸೆ. 24: ವಾಹನ ಚಾಲಕರು ಹಾಗೂ ಸಾರ್ವಜನಿಕರು ನೂತನ ಮೋಟಾರ್ ಕಾಯ್ದೆಯ ಬಗ್ಗೆ ಕಾನೂನು ತಿಳಿದುಕೊಳ್ಳಬೇಕೆಂದು ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ತಿಳಿಸಿದ್ದಾರೆ.
ಸಿದ್ದಾಪುರ ಗ್ರಾಮ ಪಂಚಾ ಯಿತಿ ಸಭಾಂಗಣ ದಲ್ಲಿ ವಾಹನ ಚಾಲಕರಿಗೆ ನೂತನ ಕಾಯ್ದೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂತನ ಕಾಯ್ದೆಗಳನ್ನು ಎಲ್ಲ ಚಾಲಕರು ಪಾಲಿಸಬೇಕು ತಪ್ಪಿದ್ದಲ್ಲಿ ಅವರುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ವಾಹನಗಳನ್ನು ಗುರುತಿಸಿದ ಸ್ಥಳದಲ್ಲಿ ನಿಲ್ಲಿಸಬೇಕು. ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿದಲ್ಲಿ ದಂಡ ವಿಧಿಸಲಾಗುವದು ಎಂದರು. ವಾಹನ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಅದಕ್ಕೂ ಕೂಡ ದೊಡ್ಡ ಮೊತ್ತದ ದಂಡ ವಿಧಿಸಲಾಗುವದು. ಯಾವದೇ ವಾಹನ ಚಾಲಕರು ಸರ್ಕಾರದ ಕಾಯ್ದೆಗಳನ್ನು ಉಲ್ಲಂಘನೆ ಮಾಡಬಾರದು ಎಂದು ತಿಳಿಸಿದರು. ಆಟೋ ಚಾಲಕರು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಸಂದರ್ಭ ಕಾನೂನನ್ನು ಪಾಲಿಸಬೇಕೆಂದು ತಿಳಿಸಿದರು. ಸಹಾಯಕ ಠಾಣಾಧಿಕಾರಿ ಕುಮಾರ್ ಇದ್ದರು.