ಕುಶಾಲನಗರ, ಸೆ. 25: ಸ್ಥಳೀಯ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 40 ಸಾವಿರ ಮೌಲ್ಯದ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಆಸ್ಪತ್ರೆಯ ಔಷಧ ಕೇಂದ್ರಕ್ಕೆ ಆಗಮಿಸುವ ರೋಗಿಗಳು ಕುಳಿತುಕೊಳ್ಳಲು ವ್ಯವಸ್ಥೆಯಿಲ್ಲದೆ ಅನಾನುಕೂಲವಾಗುತ್ತಿದ್ದ ಹಿನ್ನೆಲೆ ಸಿಬ್ಬಂದಿಗಳ ಕೋರಿಕೆ ಮೇರೆಗೆ ಸಂಘದಿಂದ 12 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಅಧ್ಯಕ್ಷ ವಿ.ಪಿ. ನಾಗೇಶ್ ತಿಳಿಸಿದರು.
ಇದೇ ಸಂದರ್ಭ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಲಾಯಿತು. ಆರೋಗ್ಯ ಕೇಂದ್ರದ ಡಾ. ಮಧುಸೂದನ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಬಿ. ಅಮೃತ್ರಾಜ್, ಸಮಾಜದ ಪ್ರಮುಖರಾದ, ಬಿ.ಆರ್. ನಾಗೇಂದ್ರಪ್ರಸಾದ್, ಪಿ.ಪಿ. ಸತ್ಯನಾರಾಯಣ, ಕೆ.ಜೆ. ನಾಗೇಂದ್ರ ಗುಪ್ತ, ಕೆ.ಜೆ. ಸತೀಶ್, ಎಸ್.ಎನ್. ನಾಗೇಂದ್ರ, ಬಿ.ಎಲ್. ಸತ್ಯನಾರಾಯಣ, ಮಹಿಳಾ ಸಂಘದ ಅಧ್ಯಕ್ಷೆ ಶೋಭಾ ಸತೀಶ್, ಕಾರ್ಯದರ್ಶಿ ವಾಣಿ ಮಹೇಶ್, ಯುವಜನ ಸಂಘದ ನಾಗ ಪ್ರವೀಣ್, ಯುವತಿಯರ ಸಂಘದ ಕಾರ್ಯದರ್ಶಿ ಲಕ್ಷ್ಮಿ ಸುಬ್ಬರಾಜ್, ಲತಾ ರಮೇಶ್ ಹಾಜರಿದ್ದರು.