ಕುಶಾಲನಗರ, ಸೆ. 25: ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ನಿರಾಶ್ರಿತರಿಗೆ ನೆರವು ಮತ್ತು ಸಂಗ್ರಹಿಸಿದ ಔಷಧಿ ವಿತರಣೆ ಕಾರ್ಯಕ್ರಮ ಕೊಪ್ಪ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಕೊಡಗು ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಉದ್ಯಮಿಗಳ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರದ ದಾನಿ ಮೇಕೆರಿರ ಕಾರ್ಯಪ್ಪ ಪಾಲ್ಗೊಂಡಿದ್ದರು. ವಕೀಲ ಪವನ್ ಪೆಮ್ಮಯ್ಯ ಮಾತನಾಡಿದರು. ಒಕ್ಕೂಟದ ಪ್ರಮುಖರಾದ ನೌಷಾದ್ ಪ್ರಾಸ್ತಾವಿಕ ನುಡಿಗಳಾಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಮೈಕಲ್ ವೇಗಸ್, ಎಂ. ಇ.ಮಹಮ್ಮದ್, ಒಕ್ಕೂಟದ ಪದಾಧಿಕಾರಿಗಳು ಇದ್ದರು.

ಸಂಗ್ರಹಿತ ಔಷಧಿಗಳನ್ನು ಮಡಿಕೇರಿ, ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮ, ವಿಕಾಸ್ ಜನಸೇವಾ ಟ್ರಸ್ಟ್‍ಗೆ ಹಸ್ತಾಂತರಿಸಲಾಯಿತು.