ಮೂರ್ನಾಡು, ಸೆ. 25: ಅಂತರ್ರಾಷ್ಟ್ರೀಯ ಶವುಲಿನ್-ಕುಂಗ್-ಪು ಕರಾಟೆ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಕರಾಟೆ ಪರೀಕ್ಷೆಯಲ್ಲಿ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 67 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ವಿವಿಧ ರೀತಿಯ ಕರಾಟೆ ಬೆಲ್ಟ್‍ಗಳನ್ನು ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಅಂತರ್ರಾಷ್ಟ್ರೀಯ ಶವುಲಿನ್-ಕುಂಗ್-ಪು ಕರಾಟೆ ಸಂಸ್ಥೆಯ ಚೆನ್ನೈನಿಂದ ಆಗಮಿಸಿದ್ದ ಕರಾಟೆ ತರಬೇತು ದಾರರಾದ ಗಂಗಾಧರ್ ಮತ್ತು ದೇವರಾಜ್ ಅವರ ಸಮ್ಮುಖದಲ್ಲಿ ಪರೀಕ್ಷಾ ಶಿಬಿರ ಜರುಗಿತು. ಶಾಲೆಯ ವ್ಯವಸ್ಥಾಪಕ ನಾಟೋಳಂಡ ವಿಜು, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್. ರಾಮಮೂರ್ತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರೋಸಮ್ಮ ಮತ್ತು ರಾಜರಾಜೇಶ್ವರಿ ಶಾಲೆಯ ಕರಾಟೆ ತರಬೇತುದಾರ ನಾಟೋಳಂಡ ನಂಜುಂಡ ಮಾರ್ಗದರ್ಶನ ನೀಡಿದ್ದರು.