ಗೋಣಿಕೊಪ್ಪಲು, ಸೆ. 25: ಕೊಡಗು ಜಿಲ್ಲಾದÀ್ಯಂತ ಕಳೆದ ಎರಡು ವರ್ಷಗಳಿಂದ ಸಂಭವಿಸುತ್ತಿರುವ ಪ್ರಕೃತಿ ವಿಕೋಪ ಮತ್ತು ಪ್ರವಾಹದಿಂದ ಕೊಡಗಿನಾದ್ಯಂತ ವ್ಯಾಪಾರ ವಹಿವಾಟು ಕುಂಟಿತಗೊಂಡಿದೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ವರ್ತಕರು ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಂದ ಪಡೆದಿರುವ ಸಾಲಕ್ಕೆ ಕನಿಷ್ಟ ಎರಡು ವರ್ಷ ಬಡ್ಡಿ ರಿಯಾಯಿತಿ ಹಾಗೂ ಅಸಲು ಕಂತು ಪಾವತಿಗೆ ಎರಡು ವರ್ಷಗಳ ಕಾಲಾವಕಾಶ ನೀಡುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾಫಿ ಮತ್ತು ಕರಿಮೆಣಸು ಕೈಕೊಟ್ಟ ಹಿನೆÀ್ನಲೆಯಲ್ಲಿ ಜಿಲ್ಲೆಯ ಕೃಷಿಕ, ರೈತರಲ್ಲಿ ಹಣದ ಮುಗ್ಗಟ್ಟು ಎದುರಾಗಿದೆ. ಪ್ರವಾಹ ಪರಿಸ್ಥಿತಿಯಲ್ಲಿ ವ್ಯಾಪಾರಸ್ಥರು ಹೊಟೇಲ್ ಉದ್ಯಮಿಗಳ ಭವಿಷ್ಯ ಕ್ಷೀಣಿಸುತ್ತಿದೆ.
ನೌಕರರ ಸಂಬಳ ಬ್ಯಾಂಕ್ ಮತ್ತು ಸಹಕಾರ ಸಂಘಗಳಿಂದ ಪಡೆದ ಸಾಲ ಪಾವತಿಸಲಾಗದ ಸ್ಥಿತಿ ಎದುರಾಗಿದೆ. ಜಿಎಸ್ಟಿಯನ್ನು ಕಟ್ಟಲಾರದ ಪರಿಸ್ಥಿತಿಗೆ ವ್ಯಾಪಾರಿ ಗಳು, ಹೊಟೇಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ತಲಪಿದ್ದಾರೆ.
ಮುಂದಿನ ವಹಿವಾಟು ವರ್ಷದವರೆಗೂ ಜಿಎಸ್ಟಿಯಲ್ಲಿ ಕೊಡಗು ಜಿಲ್ಲೆಗೆ ಸೀಮಿತಗೊಂಡಂತೆ ರಿಯಾಯಿತಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭ ಚೇಂಬರ್ನ ಅಧ್ಯಕ್ಷ ಬಿ.ಎನ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮೊಂತಿಗಣೇಶ್, ಉಪಾಧ್ಯಕ್ಷ ಅನೀಫ್, ಸಂಘಟನಾ ಕಾರ್ಯದರ್ಶಿ ಅಂಬೆಕಲ್ ನವೀನ್, ಮಾಜಿ ಅಧ್ಯಕ್ಷ ಎಂ.ಬಿ.ದೇವಯ್ಯ ಹಾಜರಿದ್ದು ವರ್ತಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ ಹಾಜರಿದ್ದರು.
-ಹೆಚ್.ಕೆ. ಜಗದೀಶ್