ಶನಿವಾರಸಂತೆ, ಸೆ. 25: ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಹೆಚ್.ಪಿ. ಶೇಷಾದ್ರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು 2018-19ನೇ ಸಾಲಿನಲ್ಲಿ ರೂ. 22,14,043 ಲಕ್ಷಗಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 9 ರಷ್ಟು ಡಿವಿಡೆಂಡ್ ನೀಡಲಾಗುವದು ಎಂದು ಘೋಷಿಸಿದರು. ಸಂಘದಲ್ಲಿ ಒಟ್ಟು 2,400 ಸದಸ್ಯರಿದ್ದಾರೆ. ಶೇರು ಹಣ ರೂ. 1 ಕೋಟಿ 20 ಲಕ್ಷ ಎಂದು ತಿಳಿಸಿದರು. ಕೆ.ಡಿ.ಸಿ.ಸಿ. ಬ್ಯಾಂಕ್ನ ವ್ಯವಸ್ಥಾಪಕ ಕೆ. ಉತ್ತಯ್ಯ ಮಾತನಾಡಿ, ಕೆ.ಡಿ.ಸಿ.ಸಿ. ಬ್ಯಾಂಕ್ನ ಸಾಲ ಸೌಲಭ್ಯ ಮತ್ತು ಠೇವಣಿಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರ ಬ್ಯಾಂಕ್ನ ಪ್ರತಿನಿಧಿ ಹೆಚ್.ಬಿ. ಸುಮಂತ್ ಮಾತನಾಡಿ, ಕೆ.ವೈ.ಸಿ. ಮೂಲ ದಾಖಲಾತಿಗಳನ್ನು ಸರಿಪಡಿಸಿ ಕೊಂಡು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್.ಟಿ.ಸಿ.ಯನ್ನು ಒಬ್ಬಂಟಿಗನಾಗಿ ಮಾಡಿಸಿಕೊಳ್ಳುವದು ಉತ್ತಮ. ಮುಂದಿನ ದಿನಗಳಲ್ಲಿ ಸಾಲಗಳನ್ನು ಡಿ.ಸಿ.ಸಿ. ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಮುಖಾಂತರ ವಿತರಿಸಲಾಗುವದು ಎಂದರು. ಸದಸ್ಯರುಗಳಾದ ಉಮಾ ಶಂಕರ್, ಪೊನ್ನಪ್ಪ, ಸುಬ್ಬಪ್ಪ, ಹರೀಶ್, ಈರಪ್ಪ ಹಾಗೂ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಂಘದ ಉಪಾಧ್ಯಕ್ಷೆ ಬಿ.ಎಂ. ಸರಳಾಕ್ಷಿ, ನಿರ್ದೇಶಕರುಗಳಾದ ಎನ್.ಬಿ. ನಾಗಪ್ಪ, ಡಿ.ಬಿ. ಧರ್ಮಪ್ಪ, ಹೆಚ್.ಪಿ. ಮೋಹನ್, ಜಿ.ಟಿ. ಲಿಂಗರಾಜು, ಎಸ್.ಆರ್. ಕಾರ್ತಿಕ್, ಸಿ.ಪಿ. ತೀರ್ಥಾನಂದ, ಎಂ.ಎಸ್. ತಂಗಮ್ಮ, ಎನ್.ಆರ್. ಪುಟ್ಟಯ್ಯ, ಹೆಚ್.ಬಿ. ಸುಮಂತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಪಿ. ಚಿನ್ನಪ್ಪ ಹಾಗೂ ನೌಕರ ವರ್ಗದವರು ಉಪಸ್ಥಿತರಿದ್ದರು. ನಿರ್ದೇಶಕ ಡಿ.ಬಿ. ಧರ್ಮಪ್ಪ ಸ್ವಾಗತಿಸಿ, ವರದಿ ಮಂಡಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಪಿ. ಚಿನ್ನಪ್ಪ ವಂದಿಸಿದರು.