ಸೋಮವಾರಪೇಟೆ, ಸೆ. 25: ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ 2019-20ನೇ ಸಾಲಿನ ಗ್ರಾಮಸಭೆ ತಾ. 26 ರಂದು (ಇಂದು) ಬೆಳಿಗ್ಗೆ 11ಕ್ಕೆ ಅಲ್ಲಿನ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ವಿ.ಜೆ. ಭಾರತಿ ವಹಿಸಲಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜೆ. ದೀಪಕ್, ತಾಲೂಕು ಪಂಚಾಯಿತಿ ಸದಸ್ಯ ಬಿ.ಎ. ಧರ್ಮಪ್ಪ, ನೋಡಲ್ ಅಧಿಕಾರಿ ಹೇಮಂತ್‍ಕುಮಾರ್ ಭಾಗವಹಿಸಲಿದ್ದಾರೆ.