ಸುಂಟಿಕೊಪ್ಪ, ಸೆ. 25: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೊಡಗರಹಳ್ಳಿಯ ಪಿ.ಕೆ. ಜಗದೀಶ್ ರೈ ಅವರಿಗೆ ನೇತಾಜಿ ಯುವಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಸನದಲ್ಲಿ ಗ್ರಾಹಕರ ವ್ಯಾಜ್ಯಗಳ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಾಜಿ ಅಧ್ಯಕ್ಷ ಎ. ಲೋಕೇಶ್‍ಕುಮಾರ್, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದಲ್ಲಿ ನೇತಾಜಿ ಯುವಕ ಸಂಘದ ಅಧ್ಯಕ್ಷ ಶಶಿಕಾಂತ ರೈ, ಗ್ರಾ.ಪಂ. ಸದಸ್ಯ ಎನ್.ಡಿ. ನಂಜಪ್ಪ, ನೇತಾಜಿ ಯುವಕ ಸಂಘ ಹಾಗೂ ಫುಟ್ಬಾಲ್ ಅಸೋಸಿಯೇಷನ್ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇತಾಜಿ ಯುವಕ ಸಂಘದ ಮಾಜಿ ಅಧ್ಯಕ್ಷ ಬಿ.ವಿ. ಚಂದ್ರಶೇಖರ್ ವಹಿಸಿದ್ದರು. ಪಿ.ಕೆ. ಜಗದೀಶ್ ರೈ ಅವರೊಂದಿಗೆ ಪತ್ನಿ ಶರ್ಮಿಳಾ ಹಾಗೂ ಪುತ್ರ ಮಿಲನ್ ಜೆ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಅಬ್ಬಾಸ್, ಶ್ರೀ ಬೈತೂರಪ್ಪ ಪೊವ್ವದಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎನ್. ಪೂಣ್ಣಚ್ಚ, ಸಮಾಜ ಸೇವಕರಾದ ಹಾಗೂ ದಾನಿಗಳಾದ ಎಂ.ಎಂ. ಮೊೈದು ಹಾಜಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಆರ್ಚಕ ನಾರಾಯಣ ಪೂಜಾರಿ, ಐಎನ್‍ಎಸ್ ಸ್ಪೋಟ್ರ್ಸ್ ಅಕಾಡೆಮಿ ಅಧ್ಯಕ್ಷ ಐಚೇಟಿರ ಸೋಮಯ್ಯ, ಜಿಲ್ಲಾ ಫುಟ್ಬಾಲ್ ಸಂಸ್ಥೆ ಕಾರ್ಯದರ್ಶಿ ಐ.ಎನ್. ಪೊನ್ನಪ್ಪ, ಆರ್‍ಎಫ್‍ಓ ಎಂ.ಎನ್. ಚಂಗಪ್ಪ, ನೇತಾಜಿ ಯುವಕ ಸಂಘದ ಸ್ಥಾಪಕ ಸದಸ್ಯ ಸಾಬು ಸೋಮಯ್ಯ, ಕಾರ್ಯದರ್ಶಿ ಸಿ.ಸಿ. ನಾರಾಯಣ, ಹಿರಿಯ ಸದಸ್ಯ ಕೆ.ಎಸ್. ಮಂಜುನಾಥ್, ಪದಾಧಿಕಾರಿಗಳು, ಗ್ರಾ.ಪಂ. ಸದಸ್ಯರು, ನೇತಾಜಿ ಯುವಕ ಸಂಘದ ಫುಟ್ಬಾಲ್ ಆಟಗಾರಾರು, ಸದಸ್ಯರುಗಳು ಪಾಲ್ಗೊಂಡಿದ್ದರು.