ವೀರಾಜಪೇಟೆ, ಸೆ. 25: ಕೊಡವರು ತಮ್ಮ ಸಂಸ್ಕøತಿ, ಭಾಷಾಭಿಮಾನದೊಂದಿಗೆ ಇಲ್ಲಿನ ಪ್ರಕೃತಿ ಸಂಪತ್ತನ್ನು ಉಳಿಸಬೇಕು ಎಂದು ಮಾಜಿ ಸಚಿವ ಯಂ.ಸಿ ನಾಣಯ್ಯ ಅಭಿಪ್ರಾಯಪಟ್ಟರು.

ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ‘ಕೊಡಗ್‍ರ ಸಿಪಾಯಿ’ ಎಂಬ ಕೊಡವ ಸಿನಿಮಾ ಬಿಡುಗಡೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಚಲನಚಿತ್ರದ ನಿರ್ದೇಶಕ ಹಾಗೂ ನಿರ್ಮಪಕ ಕೆ. ಪ್ರಕಾಶ್ ಕಾರ್ಯಪ್ಪ, ‘ಕೊಡವ ಸಿಪಾಯಿ’ ಚಲನಚಿತ್ರದ ಸಾಹಿತಿ ಯು. ಕಾವೇರಿ ಉದಯ, ಎ. ಮಹೇಶ್ ನಾಚಯ್ಯ ಮತ್ತಿತರರು ಮಾತನಾಡಿದರು. ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಚಲನಚಿತ್ರಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಚಿತ್ರದ ವಿತರಕರಾದ ಬಿ.ಪ್ರತೀಶ್ ಪೂವಯ್ಯ, ಎ. ಗಗನ್ ಗಣಪತಿ ಹಾಗೂ ನಟ ಕೌಶಿಕ್, ನಟಿ ಅಮೂಲ್ ಮತ್ತಿತರರು ಉಪಸ್ಥಿತರಿದ್ದರು.