ನಾಪೆÇೀಕ್ಲು, ಜ. 27 : ನಾಪೆÇೀಕ್ಲು ವಿನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 2017ರಲ್ಲಿ ನಡೆಸಲಾದ ಕೊಡವ ಕುಟುಂಬಗಳ ಹಾಕಿ ಹಬ್ಬ ಸರಕಾರದಿಂದ ಬಿಡುಗಡೆಗೊಂಡ 20 ಲಕ್ಷ ರೂಗಳ ಚೆಕ್ಕನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಹಾಕಿ ಹಬ್ಬದ ಆಡಳಿತ ಮಂಡಳಿ ಸಮಿತಿಯವರಿಗೆ ವಿತರಿಸಿದರು. ತಡವಾಗಿಯಾದರೂ ಹಣವನ್ನು ಬಿಡುಗಡೆಗೊಳಿಸುವಲ್ಲಿ ಸಹಕರಿಸಿ ಶಾಸಕರು ಮತ್ತು ಸರಕಾರಕ್ಕೆ ಕುಟುಂಬದವರು ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯರಾದ ಮುರುಳೀಧರ್, ಕರುಂಬಮ್ಮಯ್ಯ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಾ, ಪಂ, ಅಧ್ಯಕ್ಷೆ ಶೋಭಾ ಮೋಹನ್, ಸದಸ್ಯೆ ಕೋಡಿಯಂಡ ಇಂದಿರಾ, ಹಾಕಿ ಹಬ್ಬದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಹಾಕಿ ಹಬ್ಬದ ನಿರ್ದೇಶಕ ಬಿದ್ದಾಟಂಡ ತಮ್ಮಯ್ಯ, ಸದಸ್ಯರಾದ ಬಿದ್ದಾಟಂಡ ಪಾಪ ಮುದ್ದಯ್ಯ, ಮುತ್ತಣ್ಣ, ಬೇಬಿ ಬೆಳ್ಯಪ್ಪ, ಬಿ.ಟಿ. ಕಾರ್ಯಪ್ಪ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಪಾಡಿಯಮ್ಮಂಡ ಮನು ಮಹೇಶ್, ಮತ್ತಿತರರು ಇದ್ದರು.
-ದುಗ್ಗಳ