ಕರಿಕೆ, ಜ. 27: ಭಾಗಮಂಡಲ ವಲಯದ ಮಂಜೆಚಾಲು ಉಪವಲಯ ವ್ಯಾಪ್ತಿಯ ಮೀಸಲು ಅರಣ್ಯದೊಳಗೆ ಪರವಾನಿಗೆ ರಹಿತ ಬಂದೂಕಿನೊಂದಿಗೆ ಅಕ್ರಮವಾಗಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಲು ಯತ್ನಿಸಿದ ಪ್ರಕರಣವೊಂದನ್ನು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕರಿಕೆ ಗ್ರಾಮದ ಕುಂಡತಿಕಾನ ನಿವಾಸಿಗಳಾದ ಗಣೇಶ ಕೆ.ಎಸ್. ಹಾಗೂ ಪ್ರಭಾಕರ ಕೆ.ಡಿ. ಬಂಧಿತರಾಗಿದ್ದು, ಇವರ ಪೈಕಿ ಗಣೇಶ ಎಂಬಾತನ ವಶದಲ್ಲಿದ್ದ ಪರವಾನಿಗೆ ರಹಿತ ಒಂಟಿನಳಿಕೆ ಬಂದೂಕು, ಕರ್ತೂಸುಗಳು, ಕತ್ತಿ, ಚಾಕು, ಬ್ಯಾಗ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಲಯ ಅರಣ್ಯಾಧಿಕಾರಿ ದೇವರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯಾರಣ್ಯಾಧಿಕಾರಿ ಪ್ರಶಾಂತ, ಅರಣ್ಯ ರಕ್ಷಕರಾದ ಪರಮೇಶ್, ಅಣ್ಣಯ್ಯ, ವೀಕ್ಷಕರಾದ ಸುರೇಶ್, ಪ್ರದೀಪ್ ಪಾಲ್ಗೊಂಡಿದ್ದರು. ವರದಿ: ಹೆಚ್.ಎಸ್ಕೆ.