ಕೇರಳ ರಾಜ್ಯ ಎಂದು ಕರೆಯಲ್ಪಟ್ಟರೂ ಕೊಡಗು ಜಿಲ್ಲೆಗೆ ಅದು ನೆರೆಮನೆಯಂತೆ. ಕೊಡಗು ಜಿಲ್ಲೆಯ ಬಹುತೇಕ ಪ್ರದೇಶ ಕೇರಳ ರಾಜ್ಯಕ್ಕೆ ಹೊಂದಿಕೊಂಡಿದೆ. ಅದರಂತೆ ಜಿಲ್ಲೆಯಲ್ಲಿ ಇಂದು ಪೂಜಿಸಲ್ಪಡುತ್ತಿರುವ ಬಹುತೇಕ ದೈವಾನುದೇವತೆ ಗಳು ಕೇರಳ ರಾಜ್ಯದಿಂದ ಬಂದು ಕೊಡಗಿನಲ್ಲಿ ನೆಲೆಸಿರುವದಾಗಿದೆ. ಇನ್ನುಳಿದುದರಲ್ಲಿ ದಕ್ಷಿಣ ಕನ್ನಡ ಮತ್ತು ಕೆಲವು ಬಯಲು ಸೀಮೆಯಿಂದ ಬಂದಿರು ವಂತಹ ಆರಾಧ್ಯ ದೈವ ಗಳು. ದೇವಾನು ದೇವತೆ ಗಳು ಕೇರಳ ರಾಜ್ಯದಿಂದ ಬಂದರೂ ಕೂಡ ಕೇರಳ ರಾಜ್ಯದ ದೇವಳಗಳಲ್ಲಿ ಕೊಡಗಿನ ಕೊಡವರು ತಕ್ಕಮುಖ್ಯಸ್ಥ ರಾಗಿ ತಮ್ಮ ಅಸ್ಥಿತ್ವ ಉಳಿಸಿ ಕೊಂಡಿರು ವದು ಮಾತ್ರ ಹೆಮ್ಮೆಯ ಸಂಗತಿ. ಬೈತೂರಪ್ಪ ದೇವಳದಲ್ಲಿ ಕೊಡಗಿನ ಹಲವು ಕುಟುಂಬಸ್ಥರು ತಕ್ಕಮುಖ್ಯಸ್ಥ ರಾಗಿ ಇಂದಿಗೂ ವಾರ್ಷಿಕ ಉತ್ಸವಕ್ಕೆ ಎತ್ತೇರಾಟ, ಬಲಿವಾಡು ಸೇವೆ ಸಲ್ಲಿಸುತ್ತಾ ತಮ್ಮ ಅಧಿಕಾರ ಕಾಯ್ದುಕೊಂಡಿದ್ದಾರೆ. ಫೆ. ತಿಂಗಳ ದಿನದಂದು ಕೇರಳ ರಾಜ್ಯದ ಪಯ್ಯವೂರು ಶ್ರೀ ಶಿವ ಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ಉತ್ಸವ ದಲ್ಲಿ ಜಿಲ್ಲೆಯ ಚೇಲಾವರ ಗ್ರಾಮದ ಮುಂಡ್ಯೋಳಂಡ ಮತ್ತು ನರಿಯಂದಡ ಗ್ರಾಮದ ಬೊವ್ವೇರಿಯಂಡ ಕುಟುಂಬಸ್ಥರು ತಕ್ಕಮುಖ್ಯಸ್ಥರಾಗಿರುತ್ತಾರೆ.

ಉತ್ಸವದ ಆಮಂತ್ರಣ ನೀಡಲು ಪಯ್ಯವೂರಿ ನಿಂದ ಆಗಮಿಸುವ ಕೋರತಚ್ಚ, ದೈವ ದರ್ಶನದ ಮೂಲಕ ಮುಂಡ್ಯೋಳಂಡ ಐನ್‍ಮನೆಗೆ ಆಗಮಿಸು ತ್ತಿರುವದು ಇಂದಿಗೂ ನಡೆದುಕೊಂಡು ಬಂದಿದೆ. ಅದರಂತೆ ಜ. 29ರಂದು ಕೋರತಚ್ಚ ತಂಡ ಚೇಲಾವರದ ಮುಂಡ್ಯೋಳಂಡ ಐನ್‍ಮನೆಯಲ್ಲಿ ಬಂದು ತಂಗಲಿದೆ. 30ರ ಬೆಳಿಗ್ಗೆ ಕುಟುಂಬಕ್ಕೆ ದೈವ ದರ್ಶನ ನೀಡಿ ನಂತರ ಕಡಿಯತ್ತು ನಾಡಿನ 12 ಗ್ರಾಮಕ್ಕೆ ಸಂಬಂಧಿಸಿದ ದೇವಸ್ಥಾನ ಮತ್ತು ಐನ್‍ಮನೆಗಳಿಗೆ ತೆರಳಿ ಆಶೀರ್ವದಿಸಲಿದ್ದಾರೆ. ನಂತರ ಚೇರಂಬಾಣೆ ಸಮೀಪದ ಬೈಮನ ಐನ್ ಮನೆಗೆ ತೆರಳಿ ಆಶೀರ್ವದಿಸಿ ವಾರ್ಷಿಕ ಉತ್ಸವಕ್ಕೆ ಆಮಂತ್ರಿಸುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ. ಫೆ. 8 ರಂದು ಚೇಲಾವರ ಗ್ರಾಮದ ಪೆಬ್ಬಟಾಣೆ ಮಂದಿನಲ್ಲಿ ಮುಂಡ್ಯೋಳಂಡ ಕುಟುಂಬಸ್ಥರಿಗೆ ಕಂಡಿ ಪಣ ವನ್ನು ನೀಡುವ ಪುರಾತನ ಸಂಪ್ರದಾಯ ನಡೆಯಲಿದೆ. ಅಂದು ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿ ಫೆ. 9ರಂದು ಬೆಳಿಗ್ಗೆ ಕೇರಳದ ಪಯ್ಯವೂರಿಗೆ ಮರಳಲಿದ್ದಾರೆ. ಅದೇ ದಿನ ಬೆಳಿಗ್ಗೆ ಪಯ್ಯವೂರು ಶ್ರೀ ಶಿವಕ್ಷೇತ್ರಕ್ಕೆ ತಕ್ಕ ಮುಖ್ಯಸ್ಥರಾದ ಮುಂಡ್ಯೋಳಂಡ ಮತ್ತು ಬೊವ್ವೇರಿಯಂಡ ಕುಟುಂಬಸ್ಥರು ಎತ್ತೇರಾಟದೊಂದಿಗೆ ಅರಣ್ಯ ದಾರಿಯ ಮೂಲಕ ಸಾಗಿ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡುತ್ತಾರೆ. ಫೆ. 14ರಿಂದ 23ರವರೆಗೆ ಪಯ್ಯವೂರು ಶ್ರೀ ಶಿವ ಕ್ಷೇತ್ರದ ವಾರ್ಷಿಕ ಉತ್ಸವಕ್ಕೆ ಕಡಿಯತ್ತು ನಾಡಿನ 12 ಗ್ರಾಮಸ್ಥರು ಮತ್ತು ಬೈಮನ ಕುಟುಂಬಸ್ಥರಿಂದ ಎತ್ತೇರಾಟ ಸೇವೆ ನಡೆಯುತ್ತದೆ. ಎಂದು ಶ್ರೀ ಕ್ಷೇತ್ರದ ತಕ್ಕ ಮುಖ್ಯಸ್ಥರಾದ ಮುಂಡ್ಯೋಳಂಡ ಮತ್ತು ಬೊವ್ವೇರಿಯಂಡ ಕುಟುಂಬಸ್ಥರು ತಿಳಿಸಿದ್ದಾರೆ.

-ಪಿ.ವಿ.ಪ್ರಭಾಕರ್