ಸೋಮವಾರಪೇಟೆ,ಜ.27: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆರ್.ಎಂ.ಸಿ.ಪ್ರಾಂಗಣ ಸಮೀಪ ಹರಿಯುವ ನೀರಿನ ತೋಡಿಗೆ ಕೋಳಿ ಮಾಂಸದ ತ್ಯಾಜ್ಯಗಳನ್ನು ಎಸೆಯುತ್ತಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒತ್ತಿಕೊಂಡಂತೆ ಇರುವ ಚೌಡ್ಲು ಗ್ರಾಮ ಪಂಚಾಯಿತಿಗೆ ಸೇರಿದ ಆಲೇಕಟ್ಟೆ ರಸ್ತೆಯಲ್ಲಿ ಹೆಚ್ಚಿನ ಕೋಳಿ ಮಾಂಸದ ಅಂಗಡಿಗಳಿದ್ದು, ಇವರಲ್ಲಿ ಕೆಲವರು ಹರಿಯುವ ನೀರಿನ ತೋಡಿಗೆ ಕೋಳಿ ಪುಕ್ಕ ನೀರಿಗೆ ಹಾಕುತ್ತಿದ್ದಾರೆ.
ಇದೇ ತೋಡಿನ ನೀರು ಕಕ್ಕೆಹೊಳೆ ಸೇರುತ್ತದೆ. ಕೋಳಿ ಅಂಗಡಿಗಳಿಗೆ ಟೆಂಡರ್ ಕರೆದು ಅನುಮತಿ ನೀಡಿರುವ ಚೌಡ್ಲು ಗ್ರಾಮ ಪಂಚಾಯಿತಿ, ಈ ಅಂಗಡಿಗಳಲ್ಲಿ ಉತ್ಪಾದನೆಗೊಳ್ಳುವ ತ್ಯಾಜ್ಯಗಳ ಬಗ್ಗೆ ಮಾತ್ರ ಗಮನಹರಿಸುತ್ತಿಲ್ಲ. ಇಂತಹ ಅಂಗಡಿಗಳ ವಿರುದ್ಧ ಚೌಡ್ಲು ಗ್ರಾ.ಪಂ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.