ಗೋಣಿಕೊಪ್ಪ ವರದಿ, ಜ. 28: ಪೊನ್ನಪ್ಪಸಂತೆ ಖುವ್ವತುಲ್ ಇಸ್ಲಾಂ ಜಮಾಅತ್ ಆವರಣದಲ್ಲಿ ನಿರ್ಮಿಸಿರುವ ಮದ್ರಸ ಉದ್ಘಾಟನೆ ಹಾಗೂ ಸ್ವಲಾತ್ ವಾರ್ಷಿಕ ಸಮ್ಮೇಳನ ಫೆ. 1 ಮತ್ತು 2 ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಎಸ್. ಎಸ್. ಮುಸ್ತಫಾ ತಿಳಿಸಿದ್ದಾರೆ.
ಫೆ. 1 ರಂದು ಸಾಯಂಕಾಲ 4 ಗಂಟೆಗೆ ಖಬರ್ ಜಿಯಾರತ್ ನಡೆಯಲಿದೆ. ಧ್ವಜಾರೋಹಣವನ್ನು ಪೊನ್ನಪ್ಪಸಂತೆ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ ನೆರವೇರಿಸಲಿದ್ದಾರೆ. ಉಪಾಧ್ಯಕ್ಷ ಕೆ. ಎಂ. ಆಲಿ, ಅಧ್ಯಾಪಕ ಮುಹಮ್ಮದಲಿ ಮುಸ್ಲಿಯಾರ್, ಯೂತ್ ವಿಂಗ್ ಅಧ್ಯಕ್ಷ ಮಜೀದ್ ಬಾಖವಿ, ಖತೀಬ ಮುನೀರ್ ಬಾಖವಿ ಪಾಲ್ಗೊಳ್ಳಲಿದ್ದಾರೆ. ಧಾರ್ಮಿಕ ವಿಚಾರವಾಗಿ ಮುನೀರ್ ಹುದವಿ ವಿಳಯಲ್ ಭಾಷಣ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ. 2 ರಂದು ಮ. 1.30 ಗಂಟೆಗೆ ಧಾರ್ಮಿಕ ಸೌಹಾರ್ಧ ಸಮ್ಮೇಳನ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಉತ್ತಮ ಭಾವನೆಗಳ ಮಿಲನ ಎಂಬ ವಿಚಾರದಲ್ಲಿ ಭಾಷಣಕಾರರಾಗಿ ಅಜೀಜ್ ದಾರಿಮಿ ಮೂಡಿಗರೆ ಭಾಗವಹಿಸುವರು. ಈ ಸಂದರ್ಭ ಎಸ್.ಕೆಎಸ್ಎಸ್ಎಫ್ ಜಿಲ್ಲಾಧ್ಯಕ್ಷ ತಂಬಿಬ್ ದಾರಿಮಿ, ಗ್ರಾಮದ ಪ್ರಮುಖರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಾಯಂಕಾಲ 4 ಗಂಟೆಗೆ ಮದ್ರಸ ಕಟ್ಟಡ ಉದ್ಘಾಟನೆಯನ್ನು ಸಿಹಾಬ್ ತಂಙಳ್ ಪಾಣಕ್ಕಾಡ್ನ ಪ್ರಮುಖರಾದ ಸಯ್ಯದ್ ಹಮಿದಲಿ ನೆರವೇರಿಸಲಿದ್ದಾರೆ. ಮಸೀದಿ ಉಪಾಧ್ಯಕ್ಷ ಎ. ವಿ. ಉಮ್ಮರ್, ಕಾರ್ಯದರ್ಶಿ ಇಲ್ಯಾಸ್ ಭಾಗವಹಿಸಲಿದ್ದಾರೆ. ಸಂಜೆ 6. 30 ಗಂಟೆಗೆ ಮಜ್ಲಿಸುನ್ನೂರ್ ನಡೆಯಲಿದೆ. ದಿಕ್ರ್ ಮತ್ತು ದುಅ ನೇತೃತ್ವವನ್ನು ಶೈಖುನಾ ನಾಲಾಂಗೇರಿ ಉದ್ತಾದ್ ವಹಿಸಲಿದ್ದಾರೆ. ಈ ಸಂದರ್ಭ ಎಂ. ಎಂ. ಅಬ್ದುಲ್ಲ ಫೈಝಿ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಚಾಲಕ ನೌಷಾದ್, ಮಹಲ್ ಖತೀಬ್ ಮುನೀರ್ ಬಾಖವಿ, ಕೊಡಗು ಖುತ್ಬ ಅಧ್ಯಕ್ಷ ಉಸ್ಮಾನ್ ಫೈಜಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಪಿ. ಇಲಿಯಾಸ್, ರಫೀಕ್, ಮಜೀದ್ ಇದ್ದರು.