ಮಡಿಕೇರಿ, ಜ. 28: ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ಗೆ ಮೂರು ತಾಲೂಕುಗಳಿಂದ ಅವಿರೋಧವಾಗಿ ನೂತನ ನಿರ್ದೇಶಕರುಗಳು ಆಯ್ಕೆ ಗೊಂಡಿದ್ದಾರೆ.
ಮಡಿಕೇರಿ ಸಾಮಾನ್ಯ ಕ್ಷೇತ್ರದಿಂದ ಎಂ. ಪ್ರೇಮ ಸೋಮಯ್ಯ, ಸುನಿತಾ ಪಿ.ಎನ್., ಪಿ.ಎಸ್. ಅರವಿಂದ್, ಬೇಬಿ ಪೂವಯ್ಯ, ಮೋಂತಿ ಗಣೇಶ್, ವಿ.ಕೆ. ಪ್ರೇಮಕುಮಾರಿ, ವೀರಾಜಪೇಟೆ ಸಾಮಾನ್ಯ ಕ್ಷೇತ್ರದಿಂದ ಚಿಪ್ಪಿ ಕಾರ್ಯಪ್ಪ, ಜಯಲೀಲ ಸತೀಶ್, ಆಶಾ ಚಿಣ್ಣಪ್ಪ, ಸೋಮವಾರಪೇಟೆ ಕ್ಷೇತ್ರದಿಂದ ಲೀಲಾ ಮೇದಪ್ಪ, ಸರಸು ಪೊನ್ನಪ್ಪ, ಅಂಬಿಕಾ ರಾವ್ ಬಿ. ಅವರುಗಳು ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಯಶೋಧ ಹೆಚ್.ಬಿ., ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಎಂ.ಎಂ. ಧರ್ಮಾವತಿ, ಬಿಸಿಎಂಎ ಯಿಂದ ಕಸ್ತೂರಿ ಎನ್.ಎ. ಹಾಗೂ ಬಿ.ಸಿಎಂ.ಬಿ ಯಿಂದ ಟಿ.ಪಿ. ಜಯ ಆಯ್ಕೆಯಾಗಿದ್ದು, ತಾ. 30ರ ಚುನಾವಣೆ ರದ್ದಾಗಿದೆ.