ಸುಂಟಿಕೊಪ್ಪ, ಜ. 28 : ಆಟೋ ಚಾಲಕರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ದ್ವಾರವನ್ನು ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಸೋಮವಾರ ಉದ್ಘಾಟಿಸಿದರು.

ಮಾರುಕಟ್ಟೆ ರಸ್ತೆಯ ಆಟೋ ನಿಲ್ದಾಣಕ್ಕೆ ಆಟೋಚಾಲಕರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ ದ್ವಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಉದ್ಘಾಟಿಸಿ ಮಾತನಾಡಿದ ಅವರು ಆಟೋರಿಕ್ಷಾಗಳ ಮಾಲೀಕರು ಚಾಲಕರು ಸಾರ್ವಜನಿಕರ ಸೇವೆಯನ್ನು ಸಲ್ಲಿಸುತ್ತಿರುವುದು ಶ್ಲಾಘನೀಯ. ಅದೇ ರೀತಿಯಲ್ಲಿ ರಿಕ್ಷಾ ಚಾಲಕರು ಆಟೋ ರಿಕ್ಷಾಗಳನ್ನು ಚಲಾಯಿಸುವಾಗ ಮತ್ತು ನಿಲ್ಧಾಣದಲ್ಲಿ ನಿಲ್ಲಿಸುವಾಗ ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರಿಕ್ಷಾಗಳನ್ನು ನಿಲ್ಲಿಸಬೇಕು ಸಂಚಾರಿ ನಿಯಮಗಳನ್ನು ಚಾಚು ತಪ್ಪದೆ ಚಾಲಕರು ಪಾಲಿಸಬೇಕೆಂದರು.

ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಮಾತನಾಡಿ ಈ ರಸ್ತೆಯಲ್ಲಿ ಪದವಿಪೂರ್ವ ಕಾಲೇಜು, ದೇವಸ್ಥಾನ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದೆ ಆಟೋ ಚಾಲಕರು ತಮ್ಮ ಆಟೋಗಳನ್ನು ಮನಬಂದಂತೆ ನಿಲ್ಲಿಸುವುದರಿಂದ ವಾಹನಗಳು ಮತ್ತು ಪಾದಚಾರಿಗಳ ಸಂಚಾರಕ್ಕೆ ಆಡಚಣೆ ಉಂಟಾಗದಂತೆ ತಮ್ಮ ಆಟೋಗಳನ್ನು ನಿಲ್ಲಿಸಬೇಕೆಂದರು.

ಮತ್ತೋರ್ವ ಮುಖ್ಯ ಅತಿಥಿ ತಾ.ಪಂ. ಸದಸ್ಯೆ ವಿಮಲಾವತಿ ಮಾತನಾಡಿ ಆರೋಗ್ಯ ಸಮಸ್ಯೆಗಳು, ಅಪಘಾತಗಳು ಎದುರಾದಾಗ ಗ್ರಾಮಗಳಿಗೆ ತಲುಪಲು ಮೊದಲಿಗೆ ನೆನಪಾಗುವುದೇ ಆಟೋರಿಕ್ಷಾಗಳು, ಅದರಿಂದ ಆಟೋರಿಕ್ಷಾ ಚಾಲಕರು ಚಾಲನೆÀಯ ಸಂದರ್ಭ ಚಾಲನಾ ನಿಯಮವನ್ನು ಉಲ್ಲಂಘನೆ ಗೊಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‍ಐ ಶಿವಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಇ. ಕರೀಂ ಮಾತನಾಡಿದರು.

ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಬಿ.ಎಂ.ಸುರೇಶ್, ರಜಾಕ್, ಚಂದ್ರ, ಶಾಹಿದ್, ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಕನ್ನಡ ರಕ್ಷಣಾವೇದಿಕೆ ಅಧ್ಯಕ್ಷ ನಾಗೇಶ್‍ಪೂಜಾರಿ, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಬಿ.ಡಿ.ರಾಜು ರೈ, ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ, ಸಂಘದ ಅಧ್ಯಕ್ಷ ಸಂತೋಷ್ (ದಿನು) ಸಂಘದ ಸದಸ್ಯರು ಇದ್ದರು.

ಭವಾನಿ ಪ್ರಾರ್ಥಿಸಿ, ಬಿ.ಕೆ. ಪ್ರಶಾಂತ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.