ಕುಶಾಲನಗರ, ಜ.28: ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಕುಶಾಲನಗರದ ಎ.ಪಿ.ಸಿ.ಎಂ.ಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಆಕಾಶವಾಣಿಯ ಕಾರ್ಯನಿರ್ವಾಹಕರಾದ ದಿಗ್ವಿಜಯ್ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಸರಕಾರಿ ಪಪೂ ಕಾಲೇಜು ಉಪ ಪ್ರಾಂಶುಪಾಲೆ ಸಾವಿತ್ರಿ ಮಾತನಾಡಿದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಎಮ್.ಸಿ.ಸುಜೇಂದ್ರ ಬಾಬು ಪ್ರಾಸ್ತಾವಿಕ ನುಡಿಗಳಾಡಿದರು.

ಕೊಪ್ಪ ಗ್ರಾಮದ ಸತೀಶ್ ಮತ್ತು ತಂಡದವರಿಂದ ಸಾಕ್ಸೋ ಫೋನ್, ಶ್ರೀನಿವಾಸ್ ತಂಡದವರಿಂದ ವಾದ್ಯ ಸಂಗೀತ, ಪಂಚಮ್ ಬೋಪಣ್ಣ ಮತ್ತು ತಂಡದವರಿಂದ ಹಿಂದೂಸ್ತಾನಿ ಗಾಯನ, ಮಂಜು ಭಾರ್ಗವಿ ತಂಡದವರಿಂದ ಸಮೂಹ ನೃತ್ಯ, ವಿದ್ವಾನ್ ಶಂಕರಯ್ಯ ತಂಡದವರಿಂದ ಕಾವೇರಿ ವೈಭವ, ಗುರು ನಾಗಮಣಿ ತಂಡ ಕುಚುಪುಡಿ ನೃತ್ಯ ವೈಭವ, ನರ್ತನಂ ಇವೆಂಟ್ಸ್ ತಂಡದವರಿಂದ ಶ್ರೀ ಶ್ರೀನಿವಾಸ ಕಲ್ಯಾಣ ನೃತ್ಯರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.