ಶನಿವಾರಸಂತೆ, ಜ. 28: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರು ದೇಶ ವಿದೇಶಗಳಲ್ಲಿ ಚಿರಪರಿಚಿತ ವಾಗಿದ್ದು, ಅವರು ಜನಿಸಿದ ಊರು ಶನಿವಾರಸಂತೆ ಕೂಡ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳು ವಂತಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಫೀ.ಮಾ. ಕಾರ್ಯಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್ ಹೇಳಿದರು.

ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸ್ಮಾರಕ ಗ್ರಂಥಾಲಯದ ಆವರಣದಲ್ಲಿ ನಡೆದ ಕಾರ್ಯಪ್ಪ ಜನ್ಮದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಎಂ.ಹೆಚ್. ಮಹಮದ್ ಗೌಸ್ ಮಾತನಾಡಿ, ಶಿಸ್ತಿನ ಸಿಪಾಯಿ ಕಾರ್ಯಪ್ಪ ಅವರ ಶಿಸ್ತು ಮತ್ತು ಸಮಯ ಪ್ರಜ್ಞೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಲಿ ಎಂದರು. ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಧರ್ಮಪ್ಪ ಮಾತನಾಡಿದರು.

ಬಳಗದ ಕಾರ್ಯದರ್ಶಿ ಬಿ.ಎ.ಸ್. ಗಣೇಶ್, ನಿವೃತ್ತ ಸೇನಾನಿಗಳಾದ ನಾಗರಾಜ್, ಬೆಳ್ಳಿಯಪ್ಪ, ನಿವೃತ್ತ ಗ್ರಂಥಾಲಯ ಮೇಲ್ವಿಚಾರಕ ಎಂ.ಎನ್. ಮಹೇಶ್, ಗ್ರಾ.ಪಂ. ಸದಸ್ಯ ಬೆಳ್ಳಿಯಪ್ಪ ಪಿ.ಟಿ., ಶಿಕ್ಷಕ ಮಲ್ಲಿಕಾರ್ಜುನ, ಪ್ರಮುಖರಾದ ಮಹ್ಮದ್ ಬಿಲಾಲ್, ಮಹ್ಮದ್ ಆಘಾನ್, ರಾಜಶೇಖರ್, ರಮೇಶ್, ಆಟೋ ಚಾಲಕರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಸ್ವಾಗತಿಸಿ, ವಂದಿಸಿದರು.