ಮಡಿಕೇರಿ, ಜ. 29: ನಗರದ ಹೊರವಲಯದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ; ವಿಚಾರಣಾಧೀನ ಬಂಧಿಗಳಿಗೆ ಕಿರುಕುಳ ಹಾಗೂ ಅಂತಹ ಬಂಧಿಗಳ ಸಂಬಂಧಿಗಳಿಂದ ಹಣ ಸುಲಿಗೆಯ ಆರೋಪ ಕೇಳಿ ಬಂದಿದೆ. ಆ ಮೇರೆಗೆ ಸಂಬಂಧಿಸಿದ ಕಾರಾಗೃಹ ಅಧೀಕ್ಷಕರನ್ನು ಗುಲ್ಬರ್ಗಕ್ಕೆ ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಈ ಅಧಿಕಾರಿಯ ವರ್ಗಾವಣೆ ಬೆನ್ನಲ್ಲೇ ಕಾರಾಗೃಹದೊಳಗೆ ಸಾಕಷ್ಟು ಊಹಾಪೋಹಗಳು ಕೇಳಿಬರು ವಂತಾಗಿದೆ. ನಗರದ ಹೊರವಲ ಯದ ಕರ್ಣಂಗೇರಿಯ ನಿರ್ಜನ ಪ್ರದೇಶದಲ್ಲಿರುವ ಈ ಕಾರಾಗೃಹ ದೊಳಗೆ; ವಿಚಾರಣಾ ಬಂಧಿಗಳನ್ನು ನೋಡಲು ಬರುವಂತಹ ಸಂಬಂದಿ üಗಳಿಂದ ನಿರಂತರ ಸುಲಿಗೆಯ ಆರೋಪವೂ ಇದೆ. ಬಡ ಜನತೆಯು ಯಾವದೋ ಕಾರಣಗಳಿಂದ ಜೈಲಿನಲ್ಲಿ ಇರುವವರನ್ನು ಭೇಟಿ ಮಾಡಲು ಇಂತಿಷ್ಟು ಹಣ ನೀಡ ಲೇಬೇಕಾದ ಅಸಮಾಧಾನ ಕೇಳಿ ಬಂದಿದೆ. ಕಾರಾಗೃಹ ಅಧೀಕ್ಷಕರೇ ಗುರುತರ ಆರೋಪಿಗಳಿಗೆ ಒಳಗಾಗಿರುವ ಕಾರಣ; ಗಂಭೀರವಾಗಿ ಪರಿಗಣಿಸಿ ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ನಡುವೆ ಕಾರಾಗೃಹದಲ್ಲಿ ವಿವಿಧ ಪ್ರಕರಣಗಳ ಆರೋಪ ಎದುರಿಸುತ್ತಿರುವ ಮಹಿಳಾ ಬಂಧಿಗಳ ಮೇಲೆ ಲೈಂಗಿಕ ದೌರ್ಜನ್ಯದ ದೂರುಗಳು ವ್ಯಕ್ತಗೊಂಡಿವೆ.ಪರಸ್ಪರ ದೂಷಣೆ : ಒಂದು ಮೂಲದ ಪ್ರಕಾರ ಕಾರಾಗೃಹದಲ್ಲಿರುವ ಸ್ಥಳೀಯ ಕೆಲವು ಸಿಬ್ಬಂದಿ; ಅಪರಾಧ ಎದುರಿಸುತ್ತಿರುವ ಬಂಧಿಗಳೊಂದಿಗೆ ಶಾಮೀಲಾಗಿ; ಕಾರಾಗೃಹ ಅಧೀಕ್ಷಕರ ವಿರುದ್ಧ ಬೇನಾಮಿ ಪತ್ರಗಳನ್ನು ಬರೆಸಿ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿರುವ ಟೀಕೆ ಕೇಳಿ ಬಂದಿದೆ. ಅಲ್ಲಿನ ಮಹಿಳಾ ಬಂಧಿಗಳನ್ನು ಅನ್ಯ ಚಟುವಟಿಕೆಗಳಿಗೆ ಬಳಸಿಕೊಂಡಿರುವ ಶಂಕೆಯೂ ವ್ಯಕ್ತಗೊಂಡಿದೆ.
ಕಾರಾಗೃಹದಿಂದ ವರ್ಗಾವಣೆ ಗೊಂಡಿರುವ ಅಧೀಕ್ಷಕರ ಪ್ರಕಾರ; ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮಗಳಿಗೆ ಗಮನ ಹರಿಸಿದ್ದರಿಂದ; ತಮ್ಮ ವರ್ಗಾವಣೆ ಬೆನ್ನಲ್ಲೇ ಕೆಲವರು ಚಾರಿತ್ರ್ಯವಧೆಗೆ ಸಂಚು ರೂಪಿಸಿದ್ದು; ಅಂತಹ ಸಿಬ್ಬಂದಿಯೇ ಲಂಚಗುಳಿತನ ದೊಂದಿಗೆ ಆರೋಪ ಮಾಡುತ್ತಿರುವ ರೆನ್ನಲಾಗಿದೆ.
ಉನ್ನತ ಮಟ್ಟದ ತನಿಖೆ : ಒಟ್ಟಿನಲ್ಲಿ ದಶಕಗಳಿಂದ ನಗರದ ಹೊರವಲಯದಲ್ಲಿರುವ ಕಾರಾಗೃಹ ದೊಳಗೆ ಕಾನೂನು ಬಾಹಿರ ಚಟುವಟಿಕೆ;
(ಮೊದಲ ಪುಟದಿಂದ) ಸಾರ್ವಜನಿ ಕರಿಂದ ಹಣ ಸುಲಿಗೆ; ಮಹಿಳಾ ಬಂಧಿಗಳಿಗೆ ಕಿರುಕುಳ ಇತ್ಯಾದಿ ಆರೋಪಗಳನ್ನು ಕರ್ನಾಟಕ ರಾಜ್ಯ ಬಂಧಿಖಾನೆ ವಿಭಾಗದ ಮುಖ್ಯಸ್ಥರಾಗಿರುವ; ಒಂದೊಮ್ಮೆ ಕೊಡಗು ಪೊಲೀಸ್ ಅಧೀಕ್ಷಕರಾಗಿದ್ದ; ಪೊಲೀಸ್ ಮಹಾ ನಿರೀಕ್ಷಕ ನಾರಸಿಂಹÀ ಮೇಘಾರಿಕ್ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಬಂಧಿಸಿದ ದೋಷಾ ರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.