ವೀರಾಜಪೇಟೆ, ಜ. 29: ವೀರಾಜಪೇಟೆ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗೆ ಮುಂದಿನ ಐದು ವರ್ಷಗಳ ಸಾಲಿನ ಆಡಳಿತ ಮಂಡಳಿಗೆ ನಿರ್ದೇಶಕರುಗಳಾಗಿ 13 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಸುವ ನಿಗದಿತ ಅವಧಿಯಲ್ಲಿ 13 ಸ್ಥಾನಗಳಿಗೆ 13 ಮಂದಿ ಮಾತ್ರ ನಾಮಪತ್ರ ಸಲ್ಲಿಸಿ ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿದ್ದುದರಿಂದ ಎಲ್ಲರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಯಿತೆಂದು ಬ್ಯಾಂಕ್ನ ವ್ಯವಸ್ಥಾಪಕ ಜೆ.ಸಿ.ಬಸವರಾಜು ತಿಳಿಸಿದ್ದಾರೆ.
ವೀರಾಜಪೇಟೆ ನಾಡು ಸಾಮಾನ್ಯ ಕ್ಷೇತ್ರದಿಂದ ಬೊಳ್ಳಪಂಡ ಜೆ. ಬೋಪಣ್ಣ, ಮಾಚೇಟ್ಟೀರ ಕೆ.ಕಾವೇರಪ್ಪ, ಅಮ್ಮತ್ತಿನಾಡು ಸಾಮಾನ್ಯ ಕ್ಷೇತ್ರದಿಂದ ಕೆ.ಪಿ.ನಾಗರಾಜು, ಪೊನ್ನಂಪೇಟೆ ನಾಡು ಸಾಮಾನ್ಯ ಕ್ಷೇತ್ರದಿಂದ ವಾಟೇರಿರ ಎ.ಅಪ್ಪಚ್ಚು, ಪಿ.ಬಿ.ದಯಾನಂದ, ಶ್ರೀಮಂಗಲ ನಾಡು ಸಾಮಾನ್ಯ ಕ್ಷೇತ್ರದಿಂದ ಬೊಟ್ಟಂಗಡ ಬಿ.ಮುತ್ತಪ್ಪ, ಚಕ್ಕೇರ ಬಿ.ನಂಜಪ್ಪ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ನರಸ, ಪರಿಶಿಷ್ಟ ಪಂಗಡದಿಂದ ಕೆ.ಬಿ. ಪ್ರತಾಪ್, ಮಹಿಳೆಯರ ಮೀಸಲು ಕ್ಷೇತ್ರದಿಂದ ಪೊರುಕೊಂಡ ಬಿ.ಸವಿತ, ಮುರುವಂಡ ಕೆ.ಪೂವಮ್ಮ, ಹಿಂದುಳಿದ ಎ ವರ್ಗದ ಕ್ಷೇತ್ರದಿಂದ ಬಾನಂಡ.ಕೆ. ಅಶೋಕ್ ಕುಮಾರ್ ಹಾಗೂ ಸಾಲ ಪಡೆಯದವರ ಕ್ಷೇತ್ರದಿಂದ ಕೇಳಪಂಡ ಎನ್. ವಿಶ್ವನಾಥ್ ಆಯ್ಕೆಯಾಗಿದ್ದಾರೆ.