ಮಡಿಕೇರಿ, ಜ. 30: ಮಡಿಕೇರಿ ತಾಲೂಕು, ಅಜಿಲ ಯಾನೆ ನಲಿಕೆ ಸೇವಾ ಸಮಿತಿ ವತಿಯಿಂದ ಸೌಹಾರ್ದಯುತ ಕ್ರೀಡಾಕೂಟವು ಇತ್ತೀಚೆಗೆ ಆನ್ಯಾಳದ ಶ್ರೀ ಮಹಾ ವಿಷ್ಣುಮೂರ್ತಿ ಮೈದಾನದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ದೇವಪ್ಪ ಕೊಯನಾಡು ಉಪಸ್ಥಿತಿಯಲ್ಲಿ, ಸ್ಥಳದಾನಿ ಅಡಿಗಾರ ಜಯರಾಮ ಕಾರ್ಯಕ್ರಮ ಉದ್ಘಾಟಿಸಿದರು.

ಅತಿಥಿಗಳಾಗಿ ಸ್ಥಾಪಕಾಧ್ಯಕ್ಷ ಬಿ. ತುಕ್ರ ಅಜಿಲ, ಮಾಜಿ ಅಧ್ಯಕ್ಷರುಗಳಾದ ಬಾಲಕೃಷ್ಣ ಕೆ.ಕೆ., ಚಂದಪ್ಪ ಕಾಂತುಬೈಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಬು, ನಗರಸಭೆ ಮಡಿಕೇರಿಯ ಮಾಜಿ ಉಪಾಧ್ಯಕೆÀ್ಷ ಲೀಲಾ ಶೇಷಮ್ಮ, ಗ್ರಾಮದವರಾದ ಅರಂಬೂರು ನಾಗಪ್ಪ ಗೌಡ, ಬಂಗಾರಕೋಡಿ ಚೆನ್ನಪ್ಪ ಗೌಡ, ಜಯರಾಮ ಕಾಚೇಲು, ಬಾಲೆಂಬಿ ಸೋಮಣ್ಣ ಇತರರು ಇದ್ದರು.

ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ, ಮಹಿಳೆಯರಿಗೆ ಲಕ್ಕಿ ಗೇಮ್, ಹಗ್ಗಜಗ್ಗಾಟ, ಅಂಗನವಾಡಿ, 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಆಟೋಟಗಳು, ಪುರುಷó ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು. ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಗೆಳೆಯರ ಬಳಗ ಚೆಂಬು ಪ್ರಥಮ. ಶ್ರೀರಾಮ ದಬ್ಬಡ್ಕ ದ್ವಿತೀಯ, ಊರುಬೈಲು ತೃತೀಯ ಹಾಗೂ ಎಕೆಎಪ್ಸಿ ಆನ್ಯಾಳ ಚತುರ್ಥ ಸ್ಥಾನಿಗಳಾದರು.

ಪುರುಷರ ಹಗ್ಗಜಗ್ಗಾಟದಲ್ಲಿ, ಶ್ರೀವಿಷ್ಣು ಆನ್ಯಾಳ ಪ್ರಥಮ, ಗೆಳೆಯರ ಬಳಗ ಚೆಂಬು ದ್ವಿತೀಯ ಸ್ಥಾನವನ್ನು ಪಡೆದರು. ಮಹಿಳೆಯರ ಹಗ್ಗಜಗ್ಗಾಟದಲ್ಲಿ, ಶ್ರೀವಿಷ್ಣು ‘ಬಿ’ ಪ್ರಥಮ, ಶ್ರೀ ವಿಷ್ಣು ‘ಎ’ ದ್ವಿತೀಯ ಸ್ಥಾನವನ್ನು ಪಡೆದರು.

ಪುರುಷರ ಹಗ್ಗಜಗ್ಗಾಟದಲ್ಲಿ ಕೃಷ್ಣಪ್ಪ ಆನ್ಯಾಳ ತಂಡ ಪ್ರಥಮ, ಗೋಪಾಲ ಆನ್ಯಾಳ ತಂಡ ದ್ವಿತೀಯ ಹಾಗೂ ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಅಶ್ವಿನಿ ಸಿ ತಂಡ ಪ್ರಥಮ, ರಾಧಾ ಚಂದಪ್ಪ ತಂಡ ದ್ವಿತೀಯ ಸ್ಥಾನ ಪಡೆದರು. ಕಬಡ್ಡಿ ಪಂದ್ಯಾಟದ ಪ್ರಥಮ ಬಹುಮಾನ ದಿ. ಜಾನಕಿ ಆನ್ಯಾಳ ಅವರ ಸ್ಮರಣಾರ್ಥ ಅವರ ಮಕ್ಕಳು, ದ್ವಿತೀಯ ಬಹುಮಾನವನ್ನು ದಿನೇಶ್ ಸಣ್ಣಮನೆ, ತೃತೀಯ ಬಹುಮಾನವನ್ನು ದಿ.ಬಾಬು ಅಜಿಲ ಮತ್ತು ಚಿನ್ನಮ್ಮ ಅವರ ಸ್ಮರಣಾರ್ಥ, ಅವರ ಮಕ್ಕಳು ನೀಡಿದರು. ಕಬಡ್ಡಿ ಪಂದ್ಯಾಟದ ವೈಯಕ್ತಿಕ ಬಹುಮಾನ ಗಳನ್ನು ಚರಿತ ಎಕ್ಕಡ್ಕ ನೀಡಿದರು.

ಪುರುಷರ ಹಗ್ಗಜಗ್ಗಾಟದ ಪ್ರಥಮ ಬಹುಮಾನವನ್ನು ದಿ.ಕಣ್ಣ ಬೆಳ್ಚಪ್ಪಾಡ ಅವರ ಸ್ಮರಣಾರ್ಥ, ಅವರ ಮಕ್ಕಳು, ದ್ವಿತೀಯ ಬಹುಮಾನವನ್ನು ಅಂಬಟೆಕಜೆ ದಿನೇಶ್ ಹಾಗೂ ವಾಸುದೆವ ನಿಡಿಂಜಿ, ಮಹಿಳೆಯರ ಹಗ್ಗಜಗ್ಗಾಟದ ಪ್ರಥಮ ಬಹುಮಾನವನ್ನು ವಿಜಿ ಆ್ಯಂಟೋನಿ ಮತ್ತು ಮನೆಯವರು, ದ್ವಿತೀಯ ಬಹುಮಾನವನ್ನು ದಿ. ಸೂರ್ಯಕುಮಾರ್ ಅವರ ಸ್ಮರಣಾರ್ಥ ಅವರ ತಂದೆ ಚೆನ್ನಪ್ಪ ಗೌಡ ಬಂಗಾರಕೋಡಿ ನೀಡಿದರು.

ಪುರುಷರ ಹಗ್ಗಜಗ್ಗಾಟದ ಪ್ರಥಮ ಬಹುಮಾನವನ್ನು ಪೂವಮ್ಮ ಮತ್ತು ಮಕ್ಕಳು ಕಿರಗೂರು ಮತ್ತು ದ್ವಿತೀಯ ಬಹುಮಾನವನ್ನು ಲೋಹಿತ್ ಸುಳ್ಯ, ಮಹಿಳೆಯರ ಹಗ್ಗಜಗ್ಗಾಟದ ಪ್ರಥಮ ಬಹುಮಾನವನ್ನು ಕವಿತಾ ರಜೀಶ್ ಕುಂಟಿಕಾನ ಮತ್ತು ದ್ವಿತೀಯ ಬಹುಮಾನವನ್ನು ಬಿಟ್ಟಂಗಾಲ ಸುಬ್ರಮಣಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಕೆ. ದಿನೇಶ್, ಸದಸ್ಯರಾದ ರೇಖಾ ಚಂದ್ರಶೇಖರ್, ಮಹಾ ವಿಷ್ಣುಮೂರ್ತಿ ದೈವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಕಾಚೇಲು, ಪಯಸ್ವಿನಿ ಕೃಷಿಪತ್ತಿನ ನಿರ್ದೇಶಕ ದಿನೇಶ್ ಸಣ್ಣಮನೆ, ಕಾಚೇಲು ಪೊನ್ನಪ್ಪ ಮುಂತಾದವರಿದ್ದರು.

ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿ ಮಹಬಲೇಶ್ವರ ಭಟ್ ವಿಟ್ಲ ಮತ್ತು ತಂಡದವರು ಯಕ್ಷಗಾನ ಬಯಲಾಟ “ಮಹಿಷಮರ್ದಿನಿ” ಪ್ರಸಂಗವನ್ನು ನಡೆಸಿಕೊಟ್ಟರು.

ಸಮಿತಿಯ ಕೋಶಾಧಿಕಾರಿ ಕೃಷ್ಣಪ್ಪ ಬಿ. ಸ್ವಾಗತಿಸಿದರು, ಕಾರ್ಯದರ್ಶಿ ಅರುಣ್ ಸಿ ವಂದಿಸಿದರು, ಸುಬ್ರಾಯ ನಲಿಕೆ ಕಲ್ಮಂಜ ಕಾರ್ಯಕ್ರಮ ನಿರೂಪಿಸಿದರು.