ಕೂಡಿಗೆ, ಜ. 29: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟಿಷ್ ಸರ್ಕಾರದ ಗೋಸದನ ಜಾಗ, ಪಕ್ಕದ ಸಾಮಾಜಿಕ ಅರಣ್ಯ ಇಲಾಖೆಯವರು ಗಿಡ ಬೆಳೆಯಲು ಉಪಯೋಗಿಸು ತ್ತಿರುವ ಜಾಗವನ್ನು ಸರ್ವೆ ನಡೆಸುವಂತೆ ಕಂದಾಯ ಇಲಾಖೆಯು ಸರ್ವೆ ಇಲಾಖೆಗೆ ಸೂಚನೆ ನೀಡಿದೆ.
ಮಡಿಕೇರಿ ಕ್ಷೇತ್ರದ ಶಾಸಕರಿಗೆ ಗ್ರಾಮಸ್ಥರು ಗೋ ಸದನವನ್ನು ಪ್ರಾರಂಭಿಸುವಂತೆ ಒತ್ತಾಯ ಮಾಡಿದ್ದರು. ಈ ಬಗ್ಗೆ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅಭಿಪ್ರಾಯದಂತೆ ಕ್ಷೇತ್ರದ ಶಾಸಕರು ಹುದುಗೂರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದರು. ನಂತರ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳಿಗೆ ಸ್ಥಳದ ಸಂಪೂರ್ಣ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರು. ಅಲ್ಲದೆ ಈ ಪ್ರದೇಶದಲ್ಲಿ ಗೋಸದನ ಪ್ರಾರಂಭಿಸಲು ಎಲ್ಲಾ ರೀತಿಯ ಸೌಲಭ್ಯಗಳು ಇರುವುದರಿಂದ ಶೀಘ್ರವಾಗಿ ಗೋಸದನ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಇದೀಗ ಜಿಲ್ಲಾಧಿಕಾರಿಗಳ ಆದೇಶದಿಂದ ಸರ್ವೆ ಇಲಾಖೆ ಹುದುಗೂರು ಗ್ರಾಮದಲ್ಲಿರುವ ಬ್ರಿಟಿಷರ ಕಾಲದ ಗೋಸದನದ ಜಾಗ ಹಾಗೂ ಅರಣ್ಯ ಪ್ರದೇಶದ ಜಾಗ ಮತ್ತು ಈಗಿರುವ ಪಶುವೈದ್ಯ ಇಲಾಖೆ ಜಾಗ ಒಳಗೊಂಡಂತೆ ಆ ಪ್ರದೇಶದ ಜಾಗದ ಸವೆರ್À ಕಾರ್ಯ ನಡೆಯುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಡಿಕೇರಿ ಕ್ಷೇತ್ರದ ಶಾಸಕರನ್ನು ದೂರವಾಣಿ ಮೂಲಕ ಮಾತಾನಾಡಿಸಿದಾಗ ಹುದುಗೂರು ಜಾಗ ಸರ್ವೆ ಕಾರ್ಯ ನಡೆಸುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಅಧಿಕಾರಿಗಳು ತಮ್ಮ ಕಾರ್ಯ ಪ್ರಾರಂಭಿಸಿದ್ದಾರೆ. ಅಲ್ಲದೆ ಈ ಬಾರಿಯ ಅಧಿವೇಶನದಲ್ಲಿ ಗೋಸದನಕ್ಕೆ ಹಂತ ಹಂತವಾಗಿ ಹಣ ಬಿಡುಗಡೆಗೆ ಒತ್ತಾಯ ಮಾಡಲಾಗುವುದು. ಅಲ್ಲದೆ ಹುದುಗೂರುವಿನ ಪಶುವೈದ್ಯ ಕೇಂದ್ರ ವನ್ನು ಮೇಲ್ದರ್ಜೆಗೆ ಏರಿಸುವ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದರು.