ಶನಿವಾರಸಂತೆ, ಜ. 30: ಸಮೀಪದ ನಿಡ್ತ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. 31 ಮತ್ತು ಫೆ. 1 ರಂದು ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದೆ. ಕ್ಷಣಗಣನೆ ಹಿನ್ನೆಲೆ ನಿಡ್ತ ಗ್ರಾಮಸ್ಥರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಕಸಾಪ ಪದಾಧಿಕಾರಿ ಗಳು, ಸಮ್ಮೇಳನ ಉಪ ಸಮಿತಿ ಸದಸ್ಯರು ಸಿದ್ಧತೆ ಕಾರ್ಯದಲ್ಲಿ ಶ್ರಮಿಸಿದರು.
ಶಾಲಾ ಆಟದ ಮೈದಾನದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬೃಹತ್ ವೇದಿಕೆ ಹಾಗೂ ಬೆಸೂರು ನಂಜಣ್ಣ ಸಭಾಂಗಣ ನಿರ್ಮಾಣವಾಗಿದೆ. ಮೆರವಣಿಗೆ ಆರಂಭವಾಗುವ ಮುಳ್ಳೂರು ವೃತ್ತದಿಂದ ಶಾಲಾ ಮೈದಾನ ದವರೆಗಿನ ರಸ್ತೆ, ಗ್ರಾಮದ ರಸ್ತೆಗಳು ಸ್ವಚ್ಛ ಗೊಂಡಿದ್ದು; ಮಹಿಳೆಯರ ರಂಗೋಲಿ ಸ್ಪರ್ಧೆಯು ನಿರೀಕ್ಷೆ ಯಲ್ಲಿವೆ. 6 ಸ್ಮಾರಕ ದ್ವಾರಗಳು ಉದ್ಘಾಟನೆಗೆ ಸಿದ್ಧ ಗೊಂಡಿವೆ.
ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಹಬ್ಬಕ್ಕೆ ಕನ್ನಡದ ತೇರು ಎಳೆಯಲು ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಕಸಾಪ ಪದಾಧಿಕಾರಿ ಗಳು ಗ್ರಾಮವನ್ನು ಶಾಲಾ ಆವರಣ ವನ್ನು ಬಣ್ಣಬಣ್ಣದ ಬಂಟಿಂಗ್ಸ್, ತಳಿರುತೋರಣಗಳಿಂದ ಅಲಂಕರಿಸಿ ದ್ದಾರೆ.
ತಾ. 31 ರಂದು (ಇಂದು) ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜು, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್, ಸೋಮವಾರಪೇಟೆ ತಾ. ಕಾರ್ಯನಿರ್ವಹಣಾಧಿಕಾರಿ ಸುನೀಲ್ ಇತರರು ಪಾಲ್ಗೊಳ್ಳಲಿದ್ದಾರೆ. ನಂತರ ಬೆಳಗ್ಗೆ 8.30 ಗಂಟೆಯಿಂದ ದ್ವಾರಗಳ ಉದ್ಘಾಟನೆ ನಡೆಯಲಿದೆ. ಬಳಿಕ ಬೆಳಗ್ಗೆ 9 ಗಂಟೆಗೆ ಮುಳ್ಳೂರು ವೃತ್ತದಿಂದ ಮಂಟಪದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
ಸಮಾರಂಭದ ಉದ್ಘಾಟನೆಯು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಬೆಸೂರು ನಂಜಣ್ಣ ಸಭಾಂಗಣ ಹಾಗೂ ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೇದಿಕೆ ಉದ್ಘಾಟಿಸಲಿದ್ದಾರೆ. ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಭೋಜೇಗೌಡ, ಆಯನೂರು ಮಂಜುನಾಥ್, ಸಂಸದ ಪ್ರತಾಪ್ ಸಿಂಹ, ಸಮ್ಮೇಳನಾಧ್ಯಕ್ಷರಾದ ನಾಗೇಶ್ ಕಾಲೂರು, ಭಾರದ್ವಾಜ್ ಕೆ.ಆನಂದ ತೀರ್ಥ, ಇತರರು ಪಾಲ್ಗೊಳ್ಳಲಿದ್ದಾರೆ.
ನಂತರ ಮಧ್ಯಾಹ್ನ 1 ಗಂಟೆಗೆ ಭಾವಸಂಗಮ, ಮಧ್ಯಾಹ್ನ 1.30 ರಿಂದ ಕೃಷಿ ಮತ್ತು ಬದುಕು, ಮಧ್ಯಾಹ್ನ 3.45 ರಿಂದ ಪುಸ್ತಕ ಅವಲೋಕನ, ನಂತರ ಸಂಜೆ 5 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಫೆ.1 ರಂದು ಬೆಳಗ್ಗೆ 9 ಗಂಟೆಯಿಂದ ಜನಪದ ಕ್ರೀಡೋತ್ಸವ, ಕವಿಗೋಷ್ಠಿ, ಮಹಿಳಾಗೋಷ್ಠಿ, ಜನಪದ ಗೀತೆಗಳು, ಭಾವೈಕ್ಯತೆ ಮತ್ತು ಬದುಕು, ಬಹಿರಂಗ ಅಧಿವೇಶನ ನಡೆಯಲಿದೆ. ನಂತರ ಸಂಜೆ 4.15 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.