ಚೆಟ್ಟಳ್ಳಿ, ಜ. 29 : ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಕಾಯ್ದೆಗಳಾದ ಎನ್.ಆರ್.ಸಿ ,ಸಿ.ಎಎ ಹಾಗೂ ಎನ್.ಪಿ.ಆರ್ ವಿರೋಧಿಸಿ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ 3 ದಿವಸಗಳಿಂದ ಮಡಿಕೇರಿ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ನಿರಂತರ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಇಂದು ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ಮುಸ್ಲಿಂ ಜಮಾಅತ್ ಅಧ್ಯಕ್ಷ ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲಂ ಮಾತನಾಡಿ ಜಮಾಅತ್ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ ಕೊಳಕೇರಿ, ಮುಸ್ಲಿಂ ಜಮಾ ಅತ್ ಲೀಗಲ್ ಅಡ್ವೈಸರಿ ಅಡ್ವೊಕೇಟ್ ಕೆ.ಎಂ ಕುಂಞಬ್ದುಲ್ಲಾ, ಕೂರ್ಗ್ ಜಂಞಯ್ಯತುಲ್ ಉಲಮಾ ಕಾರ್ಯ ದರ್ಶಿ ಅಶ್ರಫ್ ಅಹ್ಸನಿ ವೀÁಜಪೇಟೆ, ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಯೂಸುಫ್ ಕೊಂಡಂಗೇರಿ,ಹಾಗೂ ಇನ್ನಿತರ ಸದಸ್ಯರು ಹಾಗೂ ಪ್ರಗತಿಪರ ಜನಾಂದೋಲನ ವೇದಿಕೆಯ ಸಂಚಾಲಕ ವಿ.ಪಿ ಶಶಿಧರ್ , ಹಲವು ಸಂಘಟನೆಗಳ ನೇತಾರರು ಭಾಗವಹಿಸಿದ್ದರು.