ಮಡಿಕೇರಿ, ಜ.29: ನಗರದ ಓಶೋ ಮಿತ್ರರ ವತಿಯಿಂದ ನಗರದ ಮೈತ್ರಿ ಸಭಾಂಗಣದಲ್ಲಿ “ರಾಜ್ಯ ಮಟ್ಟದ ಒಂದು ದಿನದ ಓಶೋ ಧ್ಯಾನ ಶಿಬಿರ”ವು ಫೆಬ್ರವರಿ 2 ರಂದು ನಡೆಯಲಿದೆ. ಈ ಶಿಬಿರದಲ್ಲಿ ಓಶೋರವರ ಡೈನಾಮಿಕ್, ಕುಂಡಲಿನಿ, ನಾದಬ್ರಹ್ಮ, ವಿಪಸನ, ನಟರಾಜ, ಸೂಫಿ ಮುಂತಾದ ಧ್ಯಾನ ವಿಧಾನಗಳನ್ನು ಕಲಿಸಲಾಗುವುದು. ಈ ಧ್ಯಾನ ಶಿಬಿರವನ್ನು ಉಚಿತವಾಗಿ ನಡೆಸಲಾಗುವುದು.

ಶಿಬಿರದಲ್ಲಿ ‘ಓಶೋ’ ಅವರ ಸಿ.ಡಿ., ಪುಸ್ತಕಗಳ ಪ್ರದರ್ಶನವಿದೆ. ನೋಂದಣಿ ಮತ್ತಿತರ ವಿವರಗಳಿಗೆ 9110248316, 9986116341, 9449584668 ನ್ನು ಸಂಪರ್ಕಿಸಬಹುದು.