ಮಡಿಕೇರಿ, ಜ. 30: ಕೊಡಗು ಜಿಲ್ಲೆಯ ಅಲ್ಲಲ್ಲಿ ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಯಾಯಿತು. ರಾಷ್ಟ್ರ ಧ್ವಜಾರೋಹಣದೊಂದಿಗೆ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಯಿತು.ಕುಶಾಲನಗರ ಸೈನಿಕ ಶಾಲೆ: ಕೂಡಿಗೆ ಸೈನಿಕ ಶಾಲೆಯಲ್ಲಿ 71ನೇ ಗಣರಾಜ್ಯೋತ್ಸವ ದಿನಾಚರಣೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಲೆಯ ಮಾಜಿ ಪ್ರಾಂಶುಪಾಲ ನಿವೃತ್ತ ಕಮಾಂಡರ್ ಎಂ.ಟಿ. ರಮೇಶ್ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದರು.

ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳು ಶಿಸ್ತುಬದ್ಧ ಪಥಸಂಚಲನದ ಮೂಲಕ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. 2019-20ನೇ ಶೈಕ್ಷಣಿಕ ಸಾಲಿನ ಅತ್ಯುತ್ತಮ ಶಿಸ್ತಿನ ವಿದ್ಯಾರ್ಥಿ ಪಾರಿತೋಷಕವನ್ನು ಕೆಡೆಟ್ ಹೆಮ್ ಮೊನ್ನಪ್ಪ, ಅತ್ಯತ್ತಮ ಶೈಕ್ಷಣಿಕ ಸಾಧನಾ ವಿದ್ಯಾರ್ಥಿ ಪಾರಿತೋಷಕವನ್ನು ಕೆಡೆಟ್ ವಿನಯ್ ಬಿ.ಎಂ. ಪಡೆದರೆ, ಅತ್ಯುತ್ತಮ ಕ್ರೀಡಾಪಟು ಪಾರಿತೋಷಕವನ್ನು ಕೆಡೆಟ್ ವಿನಯ್ ತಂಗಾಳಿ ಅವರಿಗೆ ವಿತರಿಸಲಾಯಿತು. ಶಾಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಆಂಗ್ಲಭಾಷಾ ಶಿಕ್ಷಕಿ ಎಸ್.ವಿ. ಶ್ರೀಲೇಖಾ ಹಾಗೂ ನೌಕರ ಸುದೀನಾ ಅವರಿಗೆ ಪ್ರಶಂಸನಾ ಪತ್ರವನ್ನು ಪ್ರದಾನ ಮಾಡಲಾಯಿತು.

ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಉಜ್ವಲ್ ಘೋರ್ಮಡೆ, ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆರ್.ಕೆ. ಡೇ, ಹಿರಿಯ ಶಿಕ್ಷಕ ಸೂರ್ಯನಾರಾಯಣ, ಪೆÇೀಷಕರು, ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಪೆರಾಜೆ ಗ್ರಾ.ಪಂ. ಕಚೇರಿ: ಗ್ರಾಮ ಪಂಚಾಯಿತಿ ಪೆರಾಜೆ ವತಿಯಿಂದ 71ನೇ ಗಣರಾಜ್ಯೋತ್ಸವ ಆಚರಣೆ ನಡೆಯಿತು. ಧ್ವಜಾರೋಹಣವನ್ನು ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ನೆರವೇರಿಸಿದರು.

ಈ ಸಂದರ್ಭ ಮೋನಪ್ಪ ಕುಂಬಳಚೇರಿ, ಸದಾನಂದ ಮೂಲೆಮಜಲು, ಪಂಚಾಯಿತಿ ಸದಸ್ಯರಾದ ಪ್ರಕಾಶ್ ದೊಡ್ಡಡ್ಕ, ಉದಯಚಂದ್ರ ಕುಂಬಳಚೇರಿ, ಪಂಚಾಯಿತಿ ಸಿಬ್ಬಂದಿಗಳಾದ ಶ್ರೀನಾಥ್ ಪಡುಮಜಲು, ನಾಗೇಶ್ ಕುಂಡಾಡು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಪಾಜೆ ಶಾಲೆ: ಸಂಪಾಜೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 71ನೇ ಗಣರಾಜ್ಯೋತ್ಸವ ಪ್ರಯುಕ್ತ ಸಂಪಾಜೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ್ ಪಡ್ಪು ಧ್ವಜಾರೋಹಣವನ್ನು ನೆರವೇರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಹಾಗೂ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.

ಸುಂಟಿಕೊಪ್ಪ: ಸುಂಟಿಕೊಪ್ಪ ಡಾ. ಅಂಬೇಡ್ಕರ್ ಸಂಘದ ವತಿಯಿಂದ 71ನೇ ಗಣರಾಜ್ಯೋತ್ಸವವನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ಅಂಬೇಡ್ಕರ್ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ಅಧ್ಯಕ್ಷ ಎಂ.ಎಸ್. ರವಿ ಮಾತನಾಡಿ, ಡಾ. ಅಂಬೇಡ್ಕರ್ ಒಬ್ಬ ಸರ್ವಕಾಲಿಕ ಸುಧಾರಣಾವಾದಿ, ಅವರು ಎಂದಿಗೂ ಯಾವುದೇ ಒಂದು ಜಾತಿ, ಜನಾಂಗ, ಭಾಷೆಗೆ ಕಟ್ಟು ಬಿದ್ದವರಲ್ಲ ಅವರು ಇಡೀ ದೇಶವನ್ನು ಸುಧಾರಣೆಯ ಹೊಸ ಹಂತಕ್ಕೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ನರಸ, ಸಂಘದ ಗೌರವ ಅಧ್ಯಕ್ಷ ಕಾವೇರಪ್ಪ, ಚಂದ್ರ, ಕಾರ್ಯದರ್ಶಿ ಅರುಣ್ ಕುಮಾರ್, ಸದಸ್ಯರಾದ ಲಕ್ಷ್ಮಣ, ರಾಜು, ಜನಾರ್ಧನ, ಅಶೋಕ, ಸುಂದರ, ವಸಂತ, ಹೊನ್ನಪ್ಪ, ದಿನೇಶ, ಚಂದ್ರ, ಹಾಜರಿದ್ದರು. ನೆಲ್ಲಿಹುದಿಕೇರಿ: ಕರ್ನಾಟಕ ಪಬ್ಲಿಕ್ ಶಾಲೆ ನೆಲ್ಲಿಹುದಿಕೇರಿಯಲ್ಲಿ 71ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಅಚ್ಚಯ್ಯ ಪಿ.ಸಿ. ನೆರವೇರಿಸಿದರು.

ಸಹಶಿಕ್ಷಕ ಹೆಲೆನ್ ಸಿಕ್ವೇರ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವ ಅಂಗವಾಗಿ ಪ್ರತಿಜ್ಞೆ ಬೋಧಿಸಿದರು. ನಂತರ ಸಭಾ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ನೀಡಿ ಪ್ರೋತ್ಸಾಹಿಸಲಾಯಿತು. 2019-20ನೇ ಸಾಲಿನ ಪಠ್ಯೇತರ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಪ್ರಾಂಶುಪಾಲ ಅಂತೋಣಿ ವಿವಿಯನ್ ಆಲ್ವರಿಸ್, ಉಪಪ್ರಾಂಶುಪಾಲ ಅನಿಲ್‍ಕುಮಾರ್, ಮುಖ್ಯೋಪಾಧ್ಯಾಯಿನಿ ಭಾರತಿ ಪ್ರಶಾಂತ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ವಸಂತಕುಮಾರ್, ಟಿ.ಸಿ. ಅಶೋಕ್, ಸುಕುಮಾರ್, ಬಿಂದು, ಮಯಿಮೂನಾ, ಮಿನಿ, ಶಫೀದ, ಗ್ರಾ.ಪಂ. ಸದಸ್ಯೆ ಧನಲಕ್ಷ್ಮಿ, ದತ್ತಿನಿಧಿ ಸಂಸ್ಥಾಪಕಿ ತಂಗಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಏಳನೇ ತರಗತಿ ವಿದ್ಯಾರ್ಥಿನಿ ಸ್ನೇಹ ಆಲ್‍ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಹತ್ತನೇ ತರಗತಿಯ ನಿಶ್ಯ ಕೆ.ಆರ್. ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಾದ ಶಾಹಿಮ ಪಿ.ಎಸ್., ಸ್ವಾತಿ, ಶರೀನ್ ಡಿಕೋತ್, ತಶ್ರೀನ, ನಿಶಾ, ಆಯಿಷತ್ ರಹ್ಯಾನ ಹಾಗೂ ನಾಫಿರ ಅವರುಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಚಿಕ್ಕಅಳುವಾರ: ಚಿಕ್ಕಅಳುವಾರದಲ್ಲಿರುವ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ 71ನೇ ಗಣರಾಜ್ಯೋತ್ಸವದ ಅಂಗವಾಗಿ ಭಾರತೀಯ ಸೇನೆಯ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಕುಟ್ಟಂಡ ಯು. ಬೋಪ್ಪಣ್ಣ ಧ್ವಜಾರೋಹಣ ಮಾಡಿದರು.

ಸಂಸ್ಥೆಯ ಪ್ರಭಾರ ನಿರ್ದೇಶಕಿ ಪೆÇ್ರ. ಮಂಜುಳಾ ಶಾಂತಾರಾಮ್ ಹಾಗೂ ಡಾ. ಐ.ಕೆ. ಮಂಜುಳಾ, ಡಾ. ಶ್ಯಾಮ ಸುಂದರ, ಡಾ. ಕೆ.ಕೆ. ಧರ್ಮಪ್ಪ, ಅಧಿಕಾರಿ ಮೈನಾ, ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ವೃಂದ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೆರಾಜೆ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ 71ನೇ ಗಣರಾಜ್ಯೋತ್ಸವ ಆಚರಣೆ ನಡೆಯಿತು. ಧ್ವಜಾರೋಹಣವನ್ನು ಸಂಘದ ಅಧ್ಯಕ್ಷರು ಹಾಗೂ ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ನೆರವೇರಿಸಿದರು. ಸಂಘದ ಉಪಾಧ್ಯಕ್ಷ ಮೋನಪ್ಪ ನಿಡ್ಯಮಲೆ, ಸಂಘದ ನಿರ್ದೇಶಕರಾದ ಪ್ರಮೀಳಾ, ಜಯರಾಮ್ ಪಿ.ಟಿ., ಶೇಷಪ್ಪ ಎನ್. ದಾಸಪ್ಪ ಮಡಿವಾಳ, ಬ್ಯಾಂಕ್‍ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ, ಸಿಬ್ಬಂದಿ ವರ್ಗದ ಜಾನಕಿ, ಗೋಪಾಲಕೃಷ್ಣ ಮೇಲಡ್ತಲೆ, ಅಮಿತ, ರವಿಕುಮಾರ್, ಗಂಗಾಧರ ಉಪಸ್ಥಿತರಿದ್ದರು.

ತಾಳತ್ತಮನೆ: ನೇತಾಜಿ ಯುವಕ ಮಂಡಲ ಹಾಗೂ ಯುವತಿ ಮಂಡಳಿ ತಾಳತ್ತಮನೆ ಇವರ ವತಿಯಿಂದ 71ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು ಧ್ವಜಾರೋಹಣವನ್ನು ಬೆಳಿಗ್ಗೆ 9 ಗಂಟೆಗೆ ನಿವೃತ್ತ ಸೈನಿಕ ಜೆ.ಜೆ. ದಿನೇಶ್ ನೆರವೇರಿಸಿದರು. ಈ ಸಂದರ್ಭ ನೇತಾಜಿ ಯುವಕ ಮಂಡಲ ಅಧ್ಯಕ್ಷ ಕೆ.ಕೆ. ಗಣೇಶ್ ಹಾಗೂ ಸದಸ್ಯರು ದಿವೇಶ್ ರೈ, ಆನಂದ್ ಕುಮಾರ್ ಪಿ.ವಿ., ಕೆ.ಪಿ. ಕಾರ್ಯಪ್ಪ, ಕೆ.ಆರ್. ಕುಶಾಲಪ್ಪ, ಸಲಹೆಗಾರ ಚಿಣ್ಣಪ್ಪ ಉಪಸ್ಥಿತರಿದ್ದರು.ಕುಶಾಲನಗರ: ನಂಜರಾಯಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 71ನೇ ಗಣರಾಜ್ಯೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಹಾಗೂ ತಾಲೂಕು ಪಂಚಾಯಿತಿ ಸದಸ್ಯ ವಿಜು ಚಂಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ಸರಕಾರಿ ಶಾಲೆಗಳಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣದ ಬಗ್ಗೆ ಪೆÇೀಷಕರು ಅರಿತು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗುವಂತೆ ಕರೆ ನೀಡಿದರು.

1931 ರಲ್ಲಿ ಆರಂಭಗೊಂಡ ಶಾಲೆ ಗ್ರಾಮೀಣ ವಿದ್ಯಾರ್ಥಿಗಳ ಅಭ್ಯದಯಕ್ಕೆ ಸಲ್ಲಿಸಿರುವ ಸೇವೆ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಕೂಡಿಗೆ ಡಯಟ್ ಹಿರಿಯ ಉಪನ್ಯಾಸಕ ಸಿದ್ದೇಶ್ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ. ಸದಸ್ಯ ವಿಜು ಚಂಗಪ್ಪ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಂಬು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರುಗಳಾದ ರಮೇಶ್, ಟಿ.ಎಸ್. ಡಾಲೇಶ್, ಸಿ.ಎಂ. ವಾಸು, ಜಯಾನಂದ, ಮಾಜಿ ಸೈನಿಕ ಸೋಮಶೇಖರ್ ಪಾಲ್ಗೊಂಡಿದ್ದರು. ನಿವೃತ್ತ ಹಿರಿಯ ಮುಖ್ಯ ಶಿಕ್ಷಕ ಎಂ.ಕೆ. ನಂಜುಂಡ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಶಾಲಾ ವಾರ್ಷಿಕೋತ್ಸವ ಅಂಗವಾಗಿ ನಂಜರಾಯಪಟ್ಟಣ ವ್ಯಾಪ್ತಿಯ ಸಾರ್ವಜನಿಕರಿಗೆ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ಎಲ್. ವಿಶ್ವ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಕೆ. ಸುಮೇಶ್, ಜೆ.ಸಿ. ತಮ್ಮಯ್ಯ, ಕೆ.ಜಿ. ನವೀನ್, ಸಿ.ಆರ್.ಪಿ. ಸತ್ಯನಾರಾಯಣ, ವಾಲ್ನೂರು ಸರಕಾರಿ ಶಾಲಾ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಪ್ರಮುಖರಾದ ಬೋಪಣ್ಣ, ಲೋಕೇಶ್, ದಾನಿಗಳಾದ ಪ್ರೇಮಾನಂದ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ವಾಸು, ಅಯ್ಯಂಡ್ರ ಜಯೇಂದ್ರ, ನಿವೃತ್ತ ಮುಖ್ಯ ಶಿಕ್ಷಕ ಎಂ.ಕೆ. ನಂಜುಂಡ, ಶಾಲಾ ಮುಖ್ಯ ಶಿಕ್ಷಕಿ ಹೆಚ್.ವೈ. ರತ್ನ ಇದ್ದರು. ಶಿಕ್ಷಕಿ ಎಂ.ಎಸ್. ಚಂದ್ರಿಕಾ ಕಾರ್ಯಕ್ರಮ ನಿರ್ವಹಿಸಿದರು, ಮೀನಾಕ್ಷಿ ಶಾಲಾ ವರದಿ ವಾಚನ ಮಾಡಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಶನಿವಾರಸಂತೆ: ನಿಡ್ತ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಮದ್ರಸದಲ್ಲಿ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಶೇಕಬ್ಬ ಹಾಜಿ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಅಧ್ಯಾಪಕ ಹಸೈನಾರ್ ಮುಸ್ಲಿಯಾರ್ ಕಾಜೂರು ಮಾತನಾಡಿ, ಎಲ್ಲರೂ ಸೌಹಾರ್ದತೆಯಿಂದ ಬದುಕಿ ಬಾಳಬೇಕು ಎಂದು ಹೇಳಿ ಪ್ರತಿಜ್ಞಾ ವಿಧಿ ಭೋದಿಸಿದರು. ಹಿರಿಯ ಕುಂಞಕಾಕ, ಮಾಜಿ ಸೈನಿಕ ನಾಸಿರ್, ಇಬ್ರಾಹಿಂ, ಎಂ.ಬಿ. ಹನೀಫ್ ಹಾಗೂ ಮದ್ರಸ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಹಸೈನಾರ್ ಕಾನೂರು ಸ್ವಾಗತಿಸಿ, ಹನೀಫ್ ವಂದಿಸಿದರು.

ಗೋಣಿಕೊಪ್ಪಲು: ಟಿ. ಶೆಟ್ಟಿಗೇರಿಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಕಟ್ಟೇರ ಈಶ್ವರ ಅಧ್ಯಕ್ಷತೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಬಿಜೆಪಿಯ ಮಾಜಿ ತಾಲೂಕು ಅಧ್ಯಕ್ಷ ಅರುಣ್ ಭೀಮಯ್ಯ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷ ಕೋಟ್ರಮಾಡ ನಿತಿನ್ ತಿಮ್ಮಯ್ಯ ಸಾಮಾಜಿಕ ಜಾಲತಾಣದ ನಿರ್ವಾಹಕ ಚಟ್ರಂಗಡ ಮಹೇಶ್ ಮಂದಣ್ಣ, ಬಿಜೆಪಿ ಪ್ರಮುಖರಾದ ಬೋಪಣ್ಣ, ಮಾಚಯ್ಯ, ಪ್ರವೀಣ್, ದಿನು, ತಮಿಳರ ವೇಲು, ಗಿಣಿ, ಮುತ್ತ, ದಿಲ್ಲು ಬೋಪಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

ಬಸವನಹಳ್ಳಿಯ ಪ್ರೌಢಶಾಲೆ: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜೋತ್ಸವವನ್ನು ಆಚರಿಸಲಾಯಿತು. ಸ್ಥಳೀಯ ನಿವಾಸಿ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ವಿನುಕುಮಾರ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಹಾಜರಿದ್ದರು.

ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ ಮತ್ತು ಗ್ರಾಮ ಪಂಚಾಯಿತಿ ಸದಸ್ಯೆ ಡಾಟಿ, ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕ ಬಿ.ಕೆ. ಮೋಹನ್, ಮಾಜಿ ಸೈನಿಕರಾದ ಗಾಡ್ವೀನ್, ಗಣೇಶ್ ಮುಂತಾದವರು ಹಾಜರಿದ್ದರು. ಶಿಕ್ಷಕ ಲಕ್ಷ್ಮಣ ಸ್ವಾಗತಿಸಿದರು. ಶ್ರೀನಿವಾಸ ವಂದಿಸಿದರು. ಎನ್.ಟಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣಳಾದ ಯಶಸ್ವಿನಿಗೆ ವೇದಿಕೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಸೈನಿಕರಾದ ವಿನು, ಗಾಡ್ವೀನ್, ಕುಶಾಲಪ್ಪ ಮತ್ತು ಪಿ.ಡಿ.ಓ. ಆಗಿ ಕಾರ್ಯನಿರ್ವಹಿಸುತ್ತಿರುವ ಆಯಿಷಾ ಅವರು ಹಾಜರಿದ್ದು ಪ್ರೋತ್ಸಾಹಧನ ನೀಡಿದರು. ಈ ಸಂದರ್ಭ ಶಾಲೆಯ ಶಿಕ್ಷಕ ವೃಂದದವರು ಹಾಜರಿದ್ದರು.ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಗಣರಾಜ್ಯೋತ್ಸವ ಸಮಾರಂಭ ನಡೆಯಿತು. ಧ್ವಜಾರೋಹಣವನ್ನು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್ ನೆರವೇರಿಸಿದರು.

ನಂತರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಶಾಲಾ ಶಿಕ್ಷಕ ವೃಂದ ಮತ್ತು ಪೋಷಕ ವೃಂದ ಹಾಜರಿದ್ದರು. ಮಕ್ಕಳ ಕ್ರೀಡಾಕೂಟ ಮತ್ತು ಸಾರ್ವಜನಿಕರಿಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಈ ಕ್ರೀಡಾಕೂಟವನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಟಿ. ಪ್ರಸನ್ನ ಮತ್ತು ಎಂ.ಬಿ. ನಾರಾಯಣ ಉದ್ಘಾಟಿಸಿದರು.

ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಮಾರೋಪ ಸಮಾರಂಭವು ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಸ್ವಾಗತಿಸಿದರು. ಕೂಡಿಗೆಯ ಡಯಟ್‍ನ ಹಿರಿಯ ಉಪನ್ಯಾಸಕ ಶಿವಕುಮಾರ್ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಮತ್ತು ಎಸ್.ಡಿ.ಎಂ.ಸಿ.ಯ ಮಾಜಿ ಅಧ್ಯಕ್ಷರುಗಳಾದ ಬಿ.ಪಿ. ಗುರುಬಸಪ್ಪ, ಕೆ.ಎನ್. ಚಂದ್ರಶೇಖರ್, ಬಿ.ಎನ್. ಕಾಶಿ, ಬಿ.ಎಸ್. ಧನಪಾಲ್, ಎಸ್.ಎಸ್. ರಾಮಕೃಷ್ಣ ಹಾಗೂ ಪುಷ್ಪ ಮುಂತಾದವರು ಉಪಸ್ಥಿತರಿದ್ದರು. ಮಕ್ಕಳಿಂದ ತಡರಾತ್ರಿಯ ತನಕ ಮನರಂಜನೆ ಕಾರ್ಯಕ್ರಮ ನಡೆಯಿತು. ಶಿಕ್ಷಕಿ ಮರಿಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯಶುಮತಿ ಸಾಂಸ್ಕøತಿಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕವಿತಾ ಶಾಲಾ ವರದಿ ವಾಚಿಸಿದರು. ಜಯಂತಿ ವಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ದಿನದ ಮಹತ್ವದ ಬಗ್ಗೆ ವಿಚಾರ ಮಂಡಿಸಿದರು.

ವೀರಾಜಪೇಟೆ: ಭಾರತದ ಪ್ರಜೆಗಳಾದ ನಾವುಗಳು ಸಂವಿಧಾನಕ್ಕೆ ಗೌರವ ಕೊಡಬೇಕು. ಪ್ರತಿಯೊಬ್ಬರಿಗೂ ಸಂವಿಧಾನವೆ ಶ್ರೇಷ್ಠ ಅದನ್ನು ಯಾರು ಮೀರುವಂತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ವೀರಾಜಪೇಟೆ ಸಮೀಪದ ಹೆಗ್ಗಳ ರಾಮನಗರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ 71ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹೇಶ್ ಗಣಪತಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ 1950ರ ಜನವರಿ 26 ರಂದು ಸ್ವಾತಂತ್ರ ಭಾರತದ ಸಂವಿಧಾನವನ್ನು ಅಂಗೀಕರಿಸಿ ಭಾರತವನ್ನು ಗಣರಾಜ್ಯವೆಂದು ಘೋಷಣೆ ಮಾಡಲಾಯಿತು ಎಂದರಲ್ಲದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕಾಗಿದ್ದು. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಶಿಸ್ತು ಮತ್ತು ಛಲದಿಂದ ಗುರಿಮುಟ್ಟುವಂತಾಗತಬೇಕು.

ಪ್ರತಿಯೊಬ್ಬರು ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸುವ ಮೂಲಕ ನಮ್ಮ ನೆಲ, ಜಲ, ರಾಷ್ಟ್ರದ ರಕ್ಷಣೆಗೆ ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದರು.

ಶಾಲಾಭಿವೃದ್ಧಿ ಸಮಿತಿಯ ಸೋಮಶೇಖರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಮಾತನಾಡಿ, ವಿದ್ಯಾರ್ಥಿ ಜೀವನ ಮಹತ್ವದ ಘಟ್ಟ, ಶ್ರದ್ಧೆಯಿಂದ ಕಲಿತು ಜೀವನದಲ್ಲಿ ಮುಂದೆ ಬರಬೇಕು ಎಂದರು.

ಪ್ರಾಸ್ತಾವಿಕವಾಗಿ ಶಿಕ್ಷಕಿ ಹೆಚ್.ಬಿ. ಸರಸ್ವತಿ ಮಾತನಾಡಿ, ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಸವಿವರವಾಗಿ ತಿಳಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎ. ಲಾವಣ್ಯ, ಟಿ.ಕೆ. ಶೀಲಾಮಣಿ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಶಶಿಕಾಂತ್, ಅಂಗನವಾಡಿ ಕಾರ್ಯಕರ್ತೆ ರತಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಬಿ.ಎಂ. ಸುನಿತಾ ಸ್ವಾಗತಿಸಿದರು. ಶಿಕ್ಷಕಿ ಪಿ.ಡಿ. ಮಮತ ನಿರೂಪಿಸಿದರೆ, ದಮಯಂತಿ ವಂದಿಸಿದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸಕೃತಿಕ ಕಾರ್ಯಕ್ರಮ ನಡೆಯಿತು.

ಮಡಿಕೇರಿ: 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಕೃಷಿ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ಅಧ್ಯಕ್ಷ ಅಂಬಿ ಕಾರ್ಯಪ್ಪ ನೆರವೇರಿಸಿದರು. ಸದಸ್ಯರಾದ ಮೇದಪ್ಪ, ಜಯ, ತಮ್ಮಯ್ಯ ಹಾಗೂ ಸಿಬ್ಬಂದಿಗಳು ಹಾಜರಿದ್ದರು.