ಗೋಣಿಕೊಪ್ಪ ವರದಿ, ಜ. 29: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೂಪರ್ ಲಯನ್ಸ್ ಕ್ರಿಕೆಟರ್ಸ್ ವತಿಯಿಂದ ಎರಡು ದಿನ ನಡೆಯಲಿರುವ ಗೋಣಿಕೊಪ್ಪ ಕ್ರಿಕೆಟ್ ಕಾರ್ನಿವಲ್ ಟೂರ್ನಿಗೆ ಶನಿವಾರ ಚಾಲನೆ ನೀಡಲಾಗಿತ್ತು.
ಲೀಗ್ ಮಾದರಿಯಲ್ಲಿ ನಡೆದ ಪಂದ್ಯಗಳಲ್ಲಿ 10 ತಂಡಗಳು ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಹೋರಾಟ ಮುಂದುವರಿಸಿವೆ.
ಅತಿಥೇಯ ಲಯನ್ ಕ್ರಿಕೆಟರ್ಸ್ ತಂಡವು ಈಗಲ್ ವಿರುದ್ದ ಸೋಲು ಅನುಭವಿಸಿ, ಪ್ರತಿಭಾ ವಿರುದ್ಧ ಜಯ ಸಾಧನೆ ಮಾಡಿತು.
ಫ್ರೀಡಂ ತಂಡವು ಪ್ರತಿಭಾ ವಿರುದ್ದ ಗೆಲುವು ಪಡೆಯಿತು. ಮೈಟಿ ತಂಡವು ಫ್ರೆಂಡ್ಸ್ ಹಾಗೂ ಗ್ಲೋಬಲ್ ವಿರುದ್ದ 2 ಜಯ ಸಾಧನೆ ಮಾಡಿತು. ಸೈಕ್ಲೋನ್ ತಂಡವು ಎಒನ್ ವಿರುದ್ಧ ಜಯಗಳಿಸಿ, ಗ್ಲೋಬಲ್ ವಿರುದ್ಧ ಸೋಲನುಭವಿಸಿತು.
ಈಗಲ್ ತಂಡವು ವಿರಾಟ್ ವಿರುದ್ದ ಗೆಲುವು ಪಡೆಯಿತು. ಎಒನ್ ತಂಡವು ಫ್ರೆಂಡ್ಸ್ ವಿರುದ್ಧ ಜಯಗಳಿಸಿತು. ವಿರಾಟ್ ತಂಡವು ಫ್ರೀಡಂ ವಿರುದ್ಧ ಜಯಗಳಿಸಿತು.
ಟೂರ್ನಿಯಲ್ಲಿ 10 ತಂಡಗಳಾದ ಸೈಕ್ಲೋನ್ ಕ್ರಿಕೆಟರ್ಸ್, ಎಒನ್, ಗ್ಲೋಬಲ್, ಫ್ರೆಂಡ್ಸ್, ಮೈಟಿ ಫ್ರೆಂಡ್ಸ್, ಲಯನ್ಸ್, ಈಗಲ್, ಫ್ರೀಡಂ, ಪ್ರತಿಭಾ, ವಿರಾಟ್ ಕ್ರಿಕೆಟರ್ಸ್ ತಂಡಗಳು ಪಾಲ್ಗೊಂಡಿವೆ.
ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕೊಡಗು ಹಿಂದು ಮಲಯಾಳಿ ಸಮಾಜ ಅಧ್ಯಕ್ಷ ಶರತ್‍ಕಾಂತ್, ದಾನಿಗಳಾದ ಬಿ. ಇ. ಕಿರಣ್, ಉಂಬಾಯಿ ಉದ್ಘಾಟಿಸಿದರು. ಈ ಸಂದರ್ಭ ದಾನಿಯಾದ ವೇಣುಗೋಪಾಲ್, ಸುರೇಶ್, ಸಲಹೆಗಾರ ಸಿಂಗಿ ಸತೀಶ್, ಸೂಪರ್ ಲಯನ್ಸ್ ಕ್ರಿಕೆಟರ್ಸ್ ಅಧ್ಯಕ್ಷ ಜೆಮ್ಷಿರ್, ಉಪಾಧ್ಯಕ್ಷ ಸಂತೋಷ್, ಕಾರ್ಯದರ್ಶಿ ಮಿಲ್ಟನ್, ಪ್ರಮುಖರಾದ ಇಲಿಯಸ್, ಸಲ್ಮಾನ್ ಇದ್ದರು.