ಮಡಿಕೇರಿ, ಜ. 29 : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ನೂತನ ಮೊಬೈಲ್ ಆ್ಯಪ್ ಸೇವೆಯನ್ನು ಪ್ರಾರಂಭಿಸ ಲಾಗಿದೆ. ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ಇಂದು ನೂತನ ಆ್ಯಪ್ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು, ಸಹಕಾರಿ ಬ್ಯಾಂಕಿನಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಆನ್‍ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದ ಹೆಗ್ಗಳಿಕೆ ನಮ್ಮದಾಗಿದೆ. ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಸ್ಮಾರ್ಟ್ ಫೋನ್ ಹೊಂದಿರುವ ಬ್ಯಾಂಕ್‍ನ ಗ್ರಾಹಕರು ತಮ್ಮ ಮೊಬೈಲ್‍ನಲ್ಲಿ ಈ ಸೇವೆಯನ್ನು ಪಡೆದುಕೊಳ್ಳಬಹುದು, ಗೂಗಲ್ ಪ್ಲೇ ಸ್ಟೋರ್, ಆ್ಯಪ್ ಸ್ಟೋರ್ ಮೂಲಕ “ಕೊಡಗು ಡಿಸಿಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್” ಎಂಬ ಆ್ಯಪ್ (ಮೊದಲ ಪುಟದಿಂದ) ಡೌನ್‍ಲೋಡ್ ಮಾಡಿಕೊಂಡು ಯಾವುದೇ ಬ್ಯಾಂಕ್‍ಗಳಿಗೆ ಹಣ ವರ್ಗಾವಣೆ ಮಾಡಬಹುದು.
ಮೊದಲಿನ ಹಂತದಲ್ಲಿ ನೆಫ್ಟ್ ಮೂಲಕ ಸೇವೆಯನ್ನು ಆರಂಭಿಸುತ್ತಿದ್ದು ಮುಂದಿನ ದಿನಗಳಲ್ಲಿ ಐಎಂಪಿಎಸ್, ಬಿಬಿಪಿಎಸ್ ಸೇವೆಗಳು ಸಹ ಜೋಡಣೆಯಾಗಲಿದೆ. ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಯಾವುದೇ ಶುಲ್ಕ ಕಡಿತಗೊಳಿಸುವುದಿಲ್ಲ ಎಂದು ಈ ಸಂದರ್ಭ ಮಾಹಿತಿ ನೀಡಿದರು.
ಬಿಡುಗಡೆ ಸಂದರ್ಭ ಉಪಾಧ್ಯಕ್ಷ ಕೆಳೇಟಿರ ಪೂವಯ್ಯ, ನಿರ್ದೇಶಕರಾದ ಕೆ.ಬಿ. ಚಿಣ್ಣಪ್ಪ, ಪಟ್ರಪಂಡ ರಘು ನಾಣಯ್ಯ, ಹೊಟ್ಟೆಂಗಡ ಎಂ. ರಮೇಶ್, ಕನ್ನಂಡ ಸಂಪತ್, ಎಸ್.ಬಿ. ಭರತ್ ಕುಮಾರ್, ಕೋಲತಂಡ ಸುಬ್ರಮಣಿ, ಎ. ಜಗದೀಶ್, ಅರುಣ್ ಭೀಮಯ್ಯ, ಉಷಾ ತೇಜಸ್ವಿ, ಗೋಪಾಲಕೃಷ್ಣ, ಹೊಸೂರು ಜೆ. ಸತೀಶ್, ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.