ಮಡಿಕೇರಿ, ಜ. 29: ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ತಾ. 30 ರಿಂದ (ಇಂದಿನಿಂದ) ಫೆ. 9ರ ವರೆಗೆ ಮಡಿಕೇರಿ ರಸ್ತೆಯಲಿರುವ ಪ್ಲಾಟಿನಂ ಫ್ಲಾಜಾ ಸಿದ್ದಾಪುರದಲ್ಲಿ ಏರ್ಪಡಿಸಲಾಗಿದೆ. ವ್ಯಾಪಾರಸ್ಥರು ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಲು ತಿಳಿಸಲಾಗಿದೆ.