ಮಡಿಕೇರಿ, ಜ. 30: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಜಿಲ್ಲೆಗೆ ವಿವಿಧ ಹುದ್ದೆಗಳಿಗೆ ಎನ್‍ಹೆಚ್‍ಎಮ್ ಮಾರ್ಗಸೂಚಿಯನ್ವಯ ನಿಯಮಾನುಸಾರ ಭರ್ತಿ ಮಾಡಲು ಫೆಬ್ರವರಿ 4 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ: ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಎಂ.ಬಿ.ಬಿ.ಎಸ್ ವೈದ್ಯರು, ಡೆಂಟಲ್ ಹೈಜಿನಿಸ್ಟ್, ಆಯುಷ್ ವೈದ್ಯರು (ರಾಷ್ಟ್ರೀಯ ಬಾಲ ಸ್ವಾಸ್ಥ ಕಾರ್ಯಕ್ರಮ), ಆಡಿಯೋಮೆಟಿಕ್ ಅಸಿಸ್ಟೆಂಟ್, ಜಿಲ್ಲಾ ಎಪಿಡಿಮಿಯೋಲಜಿಸ್ಟ್, ಕ್ಲಿನಿಕಲ್ ಫಿಸಿಯೋಲಜಿಸ್ಟ್. ಫೆಬ್ರವರಿ 4 ರಂದು ಬೆಳಿಗ್ಗೆ 10 ಗಂಟೆಯಿಂದ 12 ರವರೆಗೆ ಅರ್ಜಿ ವಿತರಿಸಲಾಗುವುದು. ನಂತರ ಬಂದವರನ್ನು ಪರಿಗಣಿಸಲಾಗುವುದಿಲ್ಲ. ಎಲ್ಲಾ ಮೂಲ ದಾಖಲಾತಿಗಳು ಮತ್ತು ಒಂದು ದೃಢೀಕೃತ ನಕಲು ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು. ಮೂಲ ದಾಖಲಾತಿಗಳು ಇಲ್ಲದವರನ್ನು ಹಾಗೂ ಈ ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವವಿಲ್ಲದವರನ್ನು ಆಯ್ಕೆಗೆ ಕಡ್ಡಾಯವಾಗಿ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಕಚೇರಿ ಸಮಯದಲ್ಲಿ 08272-220457 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ತಿಳಿಸಿದ್ದಾರೆ.