ಮಡಿಕೇರಿ, ಜ. 29: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ತಾ. 28 ರಂದು ವ್ಯಕ್ತಿಯೋರ್ವರು ಮೃತಪಟ್ಟಿದ್ದು; ಇವರ ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಪೊಲೀಸ್ ಇಲಾಖೆ ಕೋರಿದೆ. ರಾಜು (51) ಎಂಬವರು ಮೃತ ವ್ಯಕ್ತಿಯಾಗಿದ್ದು; ಇವರು ಕೊಡಗಿನವರು ಎಂದು ಹೇಳಲಾಗಿದೆ. ವಾರಸುದಾರರಿದ್ದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆಯನ್ನು (229333) ಸಂಪರ್ಕಿಸಬಹುದಾಗಿದೆ.