ಕೂಡಿಗೆ, ಜ. 30: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಕಕ್ಷೆ ಭವ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೊದಲಿಗೆ ಗೊಂದಿ ಬಸವನಹಳ್ಳಿ ವ್ಯಾಪ್ತಿಯ ಸದಸ್ಯರಾದ ಹರೀಶ್, ಜಗದೀಶ್ ಸೇರಿದಂತೆ ಸರ್ವ ಸದಸ್ಯರು ಕಾಮಗಾರಿಗಳು ಇನ್ನೂ ನಡೆಯಬೇಕಾಗಿರುವ ವಿಷಯವಾಗಿ ತ್ವರಿತವಾಗಿ ಕ್ರಿಯಾಯೋಜನೆ ಕೈಗೊಳ್ಳದಿರುವ ವಿಷಯಗಳ ಬಗ್ಗೆ ಅಧ್ಯಕ್ಷರ ವಿರೋಧವಾಗಿ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಆರ್ಥಿಕ ವರ್ಷದ ಕೊನೆ ಹತ್ತಿರವಾಗುತ್ತಿರುವುದರಿಂದ ಕಾಮಗಾರಿಯ ಕ್ರಿಯಾ ಯೋಜನೆಯ ಪ್ರಕ್ರಿಯೆಯನ್ನು ನಡೆಸುವಂತೆ ಸರ್ವ ಸದಸ್ಯರು ಒತ್ತಾಯಿಸಿದರು. ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿಗಳ ಬಗ್ಗೆ ಆನೇಕ ವಿಚಾರಗಳು ಪ್ರಸ್ತಾಪವಾದವು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಾರಾನಾಥ ಸೇರಿದಂತೆ ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿ ರಾಜಶೇಖರ ಇದ್ದರು.