ಗೋಣಿಕೊಪ್ಪಲು: ಎಳೆಯ ಪ್ರತಿಭೆಗಳಿಗೆ ಶಾಲಾ ದಿನಗಳಲ್ಲಿಯೇ ವೇದಿಕೆ ಕಲ್ಪಿಸುವುದರಿಂದ ಇವರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ಸೂಸಲು ಅವಕಾಶವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಅಭಿಪ್ರಾಯಪಟ್ಟರು.

ಬಾಳೆಲೆ ಹೋಬಳಿಯ ಕಿರುಗೂರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆಗೊಂಡಿದ್ದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳು ಲಭ್ಯವಾಗುತ್ತಿದೆ. ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ವಿನು ಚಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಭ್ಯಾಸ ಮಾಡಿ ಉತ್ತಮ ಹುದ್ದೆ ಅಲಂಕರಿಸಿದ್ದಾರೆ ಎಂದರು. ಕಾಫಿ ಬೆಳೆಗಾರ ಪುಚ್ಚಿಮಾಡ ಲಾಲಾ ಪೂಣಚ್ಚ ಮಾತನಾಡಿ, ಶಾಲೆಗೆ ವಿದ್ಯಾರ್ಥಿಗಳನ್ನು ತಪ್ಪದೆ ಕಳುಹಿಸುವ ಜವಾಬ್ದಾರಿ ಪೋಷಕರದ್ದಾಗಿದೆ ಎಂದರು.

ಪ್ರಗತಿಪರ ರೈತರಾದ ತಿಮ್ಮಯ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕುಶಾಲಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂ.ಎನ್. ಬೋಪಣ್ಣ, ನಿವೃತ್ತ ಶಿಕ್ಷಕ ಚೆಟ್ರುಮಾಡ ಶಂಕರ್ ಇನ್ನಿತರರು ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತನುಜ, ಸಿ.ಆರ್.ಪಿ.ಯ ಪುಷ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿ ಡೈನಾ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯಿನಿ ರಾಧ ಸ್ವಾಗತಿಸಿ, ಸಂದ್ಯಾ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮ, ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೀರಾಜಪೇಟೆ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂದು ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಆಸ್ಪದ ನೀಡಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು. ಎಲ್ಲಾ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಪ್ರತಿಜ್ಞೆ ಸ್ವೀಕರಿಸಿದರು.

ಶನಿವಾರಸಂತೆ: ಪೋಷಕರು ಮಕ್ಕಳ ಅಂಕಗಳಿಕೆಗೆ ಮಾತ್ರ ಮಹತ್ವ ನೀಡದೇ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಗೆ ಮಹತ್ವ ನೀಡಬೇಕು ಎಂದು ಹಾಸನ ಜಿಲ್ಲಾ ವಾರ್ತಾಧಿಕಾರಿ ವಿನೀದ್ ಚಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಸುಪ್ರಜ ಗುರುಕುಲದ ದಶಮಾನೋತ್ಸವ ಪ್ರಯುಕ್ತ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣದಿಂದ ಜೀವನಕ್ಕೆ ಬೇಕಾದ ಕೌಶಲ್ಯ ಹಾಗೂ ಕರಾಟೆ, ಸಾಂಸ್ಕøತಿಕ ಕಾರ್ಯಕ್ರಮದಿಂದ ದೇಹಕ್ಕೆ ಬೇಕಾದ ಆರೋಗ್ಯ ಲಭಿಸುತ್ತದೆ. ಇಂದಿನ ಮಕ್ಕಳೇ ಪೋಷಕರ ಆಸ್ತಿ. ಪೋಷಕ ಮತ್ತು ಶಿಕ್ಷಕರು ಜತೆ ಸೇರಿ ಮಗುವೊಂದರ ಭವಿಷ್ಯ ರೂಪಿಸಬೇಕು ಎಂದರು.

ಹಾಸನ ಆಕಾಶವಾಣಿ ಸಹಾಯಕ ಇಂಜಿನಿಯರ್ ಆರ್.ಎನ್. ಗೀತಾ ಮಾತನಾಡಿ, ದಶಮಾನೋತ್ಸವ ಸಾಧನೆಯ ಸಂಕೇತ. ಅಂದು ಸುಪ್ರಜ ಗುರುಕುಲದಲ್ಲಿ ಬಿತ್ತಿದ ಶಿಕ್ಷಣ ಬೀಜ ಇಂದು ಹೆಮ್ಮರವಾಗಿ ಪ್ರಗತಿ ಸಾಧಿಸಿ ಉತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷೆ ಡಿ. ಸುಜಲಾದೇವಿ ಮಾತನಾಡಿದರು. ಮುಖ್ಯ ಶಿಕ್ಷಕಿ ಕೆಂಚಮ್ಮ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿವಿಧ ಭಾಷೆಯ ಸಾಮೂಹಿಕ ನೃತ್ಯ, ಕರಾಟೆ, ಪ್ರಹಸನ ಪ್ರದರ್ಶಿಸಿ ರಂಜಿಸಿದರು.

ಕುಶಾಲನಗರ: ಕುಶಾಲನಗರ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ನೆಲ್ಲಿಹುದಿಕೇರಿ ಶಾಲೆಯ ಸ್ಕೌಟ್ ತರಬೇತುದಾರ ಜಿಮ್ಮಿ ಸಿಕ್ವೇರ ಚಾಲನೆ ನೀಡಿದರು. ನಂತರ ಹಳೆ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಜಾನಕಿ ಅಪ್ಪಣ್ಣ, ಶಿಕ್ಷಕರಾದ ಪಾರ್ಥಸಾರಥಿ, ಹೇಮಲತಾ, ಪದ್ಮಜ, ಶಿವರಾಮ್, ಆಯಚ್ಚು, ಪುಷ್ಪ, ನಿರಾಜಾಕ್ಷಿ, ಪರಮೇಶ್ವರಿ ಭಟ್, ಈಶ, ಜನಾರ್ಧನ್ ಅವರುಗಳನ್ನು ಗೌರವಿಸಲಾಯಿತು. ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಮುಖರಾದ ಗಣೇಶ್, ಪುರುಷೋತ್ತಮ, ರವಿಕುಮಾರ್, ದಿವ್ಯ, ಲಕ್ಷ್ಮಿ, ಚೈತನ್ಯ, ಉಷಾ, ಮೋಹನ್, ಮತ್ತಿತರರು ಇದ್ದರು.ಕೂಡಿಗೆ: ಇಲ್ಲಿಗೆ ಸಮೀಪದ ಶಿರಂಗಾಲದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನದ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವು ನಡೆಯಿತು. ಕಾಲೇಜಿನ ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಎ.ಎಸ್. ಶ್ರೀಲತಾ, ಹಿರಿಯ ಸಹ ಶಿಕ್ಷಕ ಸೋಮಯ್ಯ, ಉಪನ್ಯಾಸಕರು, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಸಭೆಯಲ್ಲಿ ಹಾಜರಿದ್ದರು.

ನಾಪೆÇೀಕ್ಲು: ಸಮಗ್ರ ಶಿಕ್ಷಣ ಅಭಿಯಾನದ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಪೆಟ್ಟಿಗೆಯಲ್ಲಿ ಪ್ರಯೋಗಾಲಯ ತರಬೇತಿ ಕಾರ್ಯಾಗಾರ ನಾಪೆÇೀಕ್ಲು ಕರ್ನಾಟಕ ಪಬ್ಲ್ಲಿಕ್ ಶಾಲೆಯಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ಮೂರ್ನಾಡು ಮತ್ತು ನಾಪೆÇೀಕ್ಲು ಕ್ಲಸ್ಟರಿನ ಆಯ್ದ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲೆ ಪಿ.ಕೆ. ನಳಿನಿ ವಹಿಸಿದ್ದರು.

ಮಾರ್ಗದರ್ಶಕರಾಗಿ ಪಾಲ್ಗೊಂಡಿದ್ದ ವಿಜ್ಞಾನ ಶಿಕ್ಷಕರಾದ ಪಿ. ಮಾದೇಶ ಹಾಗೂ ಮಹದೇವಸ್ವಾಮಿ ವಿಜ್ಞಾನ ಪ್ರಯೋಗಗಳನ್ನು ಮಾಡಿ ಪ್ರದರ್ಶಿಸಿದರು.

ವೀರಾಜಪೇಟೆ: ವಿದ್ಯಾರ್ಥಿಗಳು ಹಲವು ಬಗೆಯ ಶಿಕ್ಷಣ ಪಡೆದು ದೇಶ ಮತ್ತು ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ನಾಗಾಲೋಟದಲ್ಲಿ ಓಡುತ್ತಿದ್ದಾರೆ. ಆದರೆ ಸಂದರ್ಶನ ಸಮಯದಲ್ಲಿ ಕೌಶಲ್ಯದ ಬಗ್ಗೆ ತಿಳುವಳಿಕೆಯಿಲ್ಲದೆ ಹಿಂದಿರುಗುತ್ತಿದ್ದಾರೆ ಎಂದು ಕಾವೇರಿ ಕಾಲೇಜಿನ ಮಾಜಿ ಪ್ರಾಂಶುಪಾಲ ಮತ್ತು ಹಾಲಿ ಮೂರ್ನಾಡು ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ವಿಷಾದ ವ್ಯಕ್ತಪಡಿಸಿದರು.

ವೀರಾಜಪೇಟೆ ಕೊಡವ ಸಮಾಜ ಆಶ್ರಯದಲ್ಲಿ ತ್ರಿವೇಣಿ ಶಾಲೆಯ ಸಭಾಂಗಣದಲ್ಲಿ ನಡೆದ 2019-2020ನೇ ಸಾಲಿನ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾನಿಧಿ ಮತ್ತು ದತ್ತಿನಿಧಿಯ ಸಹಾಯಧನ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪೂವಣ್ಣ, ವಿದ್ಯಾರ್ಥಿಗಳು ನವಯುಗದಲ್ಲಿ ಸಾಗುತ್ತಿರುವ ಪ್ರಸ್ತುತ ವಿದ್ಯಮಾನಗಳಿಗೆ ಅನುಗುಣವಾಗಿ ಶಿಕ್ಷಣ ಪಡೆಯುವಂತಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಮುಖ್ಯ ಕೌಶಲ್ಯದೊಂದಿಗೆ ಕಲಿಕೆಗೆ ಪ್ರಾಮುಖ್ಯತೆ ನೀಡಿದಲ್ಲಿ ಸಾಧನೆಯಾಗುತ್ತದೆ ಮತ್ತು ಭವಿಷ್ಯ ಉತ್ತಮವಾಗಿ ರೂಪಿತಗೊಳ್ಳುತ್ತದೆ ಎಂದು ಹೇಳಿದರು.

ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಶಕ್ತಿ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.

ವಿವಿಧ ಪದವಿ, ಪದವಿಪೂರ್ವ, ಎಸ್.ಎಸ್.ಎಲ್.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮಾಜದ ಒಟ್ಟು 86 ವಿದ್ಯಾರ್ಥಿಗಳಿಗೆ ದತ್ತಿನಿಧಿ ಮತ್ತು ವಿದ್ಯಾನಿಧಿ ಸಹಾಯಧನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ವಿವಿಧ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ವಿದ್ಯಾನಿಧಿಯಲ್ಲಿ ಒಟ್ಟು 70 ವಿದ್ಯಾರ್ಥಿಗಳಿಗೆ 67,500 ನಗದು ಮತ್ತು ದತ್ತಿನಿಧಿಯಲ್ಲಿ ಒಟ್ಟು 38 ವಿದ್ಯಾರ್ಥಿಗಳಿಗೆ 18,200 ರೂ.ಗಳ ನಗದನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಕೊಡವ ಸಮಾಜ ಆಡಳಿತ ಮಂಡಳಿಯ ನಿರ್ದೇಶಕರಾದ ಕೋಟೆರ ಗಣೇಶ್, ಅಲ್ಲಪಂಡ ಚಿಣ್ಣಪ್ಪ, ಕೊಂಗಂಡ ಟಾಟು ನಾಣಯ್ಯ, ಐಚಂಡ ವಾಸು, ಮುಕ್ಕಾಟಿರ ದಮಯಂತಿ ಮಂದಣ್ಣ, ಪಟ್ರಪಂಡ ಗೀತಾ ಬೆಳ್ಯಪ್ಪ ಮತ್ತು ತ್ರಿವೇಣಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಆಪಾಡಂಡ ಕಾರ್ಯಪ್ಪ ಉಪಸ್ಥಿತರಿದ್ದರು.

ಕೊಡವ ಸಮಾಜದ ನಿರ್ದೇಶಕಿ ಬೊವ್ವೇರಿಯಂಡ ಆಶಾ ಸುಬ್ಬಯ್ಯ ನಿರೂಪಿಸಿ, ಕುಲ್ಲಚಂಡ ಪೂಣಚ್ಚ ಸ್ವಾಗತಿಸಿ, ವಂದಿಸಿದರು.

ಸೋಮವಾರಪೇಟೆ: ಇಲ್ಲಿನ ಪ್ರಕೃತಿ ಸಾಹಿತ್ಯ ಬಳಗದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಸಮೀಪದ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

ಸ್ಪರ್ಧಾ ಕಾರ್ಯಕ್ರಮವನ್ನು ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಕೆ. ಗೋಪಾಲ್ ವಹಿಸಿದ್ದರು. ಮಾಜಿ ಸೈನಿಕ ಪ್ರೇಮ್‍ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾಸಂಸ್ಥೆಯ ನಿರ್ದೇಶಕ ಎಸ್.ಆರ್. ಉತ್ತಯ್ಯ, ಸಾಹಿತ್ಯ ಬಳಗದ ಸದಸ್ಯೆ ಚಂದ್ರಾವತಿ, ದರ್ಶಿನಿ, ಶಿಕ್ಷಕ ಶಿವಾನಂದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಕೃತಿ ಸಾಹಿತ್ಯ ಬಳಗದ ಅಧ್ಯಕ್ಷೆ ರಾಧಿಕ ಕಾಳಪ್ಪ ಮತ್ತು ಶಿಕ್ಷಕ ಎನ್. ವೆಂಕಟೇಶ್ ಅವರುಗಳು ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.*ಗೋಣಿಕೊಪ್ಪಲು: ವಿವಿಧ ತರಕಾರಿಗಳು, ಹಣ್ಣು, ಸೊಪ್ಪು ಸೇರಿದಂತೆ ತಂಪು ಪಾನೀಯ, ಕರಿದ ತಿಂಡಿಗಳನ್ನು ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳು ವ್ಯಾಪಾರಗಳ ಬಗ್ಗೆ ಅರಿತುಕೊಂಡರು.

ಹುದಿಕೇರಿ ಟಿಟಲ್ ಫ್ಲವರ್ ಹೈಯರ್ ಶಾಲೆಯ ವಿದ್ಯಾರ್ಥಿಗಳು ಹುದಿಕೇರಿ ಪಟ್ಟಣದ ಮಾರುಕಟ್ಟೆಯಲ್ಲಿ ವ್ಯಾಪಾರಗಳನ್ನು ನಡೆಸಿದರು. ಶಿಕ್ಷಕರು, ಮಕ್ಕಳ ಪೆÇೀಷಕರು ಸೇರಿದಂತೆ ಸಾರ್ವಜನಿಕರು ಸಹ ಮಕ್ಕಳಿಂದ ವಿವಿಧ ವಸ್ತುಗಳನ್ನು ಖರೀದಿಸಿ ವ್ಯಾಪಾರದ ವಹಿವಾಟನ್ನು ವೃದ್ಧಿಗೊಳಿಸಿದರು.

ಮಕ್ಕಳು ಮನೆಯಿಂದ ತಂದಂತಹ ಸೋರೆಕಾಯಿ, ಕುಂಬಳಕಾಯಿ, ಅಲಸಂಡೆ, ಅವರೆಕಾಯಿ, ಹಲಸಿನಕಾಯಿ, ಬಾಳೆಕಾಯಿ, ನುಗ್ಗೆ ಸೊಪ್ಪು, ಕೀರೆ ಸೊಪ್ಪು, ಮೂಲಂಗಿ ಸೊಪ್ಪು, ಪಪ್ಪಾಯಿ, ಸಪೆÇೀಟ, ಚಕೋತ, ಕೈಹುಳಿ, ಜೋಳ, ತೆಂಗಿನಕಾಯಿ, ನಿಂಬೆಹಣ್ಣು, ಕಲ್ಲಂಗಡಿ, ಕಿತ್ತಳೆ ಹಣ್ಣು, ಮೊಳಕೆಭರಿತ ಕಾಳುಗಳು, ಕೆಸ, ಚೆರಮೆ ಸೊಪ್ಪು, ಗೆಣಸು, ಮನೆಯಲ್ಲಿ ತಯಾರು ಮಾಡಿದ ವಿವಿಧ ಬಗೆಯ ಉಪ್ಪಿನಕಾಯಿಗಳನ್ನು ಮಾರಾಟ ಮಾಡಿ ವಿದ್ಯಾರ್ಥಿಗಳು ಗಮನ ಸೆಳೆದರು.

ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಹುದಿಕೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಫೀರ್ ಚಾಲನೆ ನೀಡಿದರು. ಮುಖ್ಯ ಶಿಕ್ಷಕಿ ಆಶಾ ಜ್ಯೋತಿ, ಹುದಿಕೇರಿ ಕೊಡವ ಸಮಾಜದ ವ್ಯವಸ್ಥಾಪಕ ಕಿರಿಯಮಾಡ ರಾಜ್ ಸುಬ್ಬಯ್ಯ ಸೇರಿದಂತೆ ಸಹ ಶಿಕ್ಷಕರು, ಪೆÇೀಷಕರು ಮಕ್ಕಳ ವ್ಯಾಪಾರದ ಕೌಶಲ್ಯವನ್ನು ಕಂಡು ಬೆರಗಾದರು.

ಮಡಿಕೇರಿ: ಕುಶಾಲನಗರದ ಕೆ.ಎಂ.ಟಿ. ವಿದ್ಯಾಸಂಸ್ಥೆಯಲ್ಲಿ 11ನೇ ವರ್ಷದ ವಾರ್ಷಿಕೋತ್ಸವ ನಡೆಯಿತು. ಮುಖ್ಯ ಅತಿಥಿಗಳಾಗಿ ಮೈಸೂರಿನ ಅಪೋಲೋ ಆಸ್ಪತ್ರೆಯ ವೈದ್ಯೆ ಡಾ. ಎಂ.ಎಸ್. ಶ್ರುತಿ ಪುರುಷೋತ್ತಮ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಪೀಳಿಗೆಯ ಮಕ್ಕಳು ಹೇಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಇದರ ಬಳಕೆಯಿಂದ ತಮ್ಮ ಆರೋಗ್ಯ ಮತ್ತು ವಿದ್ಯಾಭ್ಯಾಸದ ಕಡೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ತಿಳಿಸುತ್ತ ಪೋಷಕರು ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಕ್ಕಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ನೆರೆದಿದ್ದ ಜನಸ್ತೋಮವನ್ನು ರಂಜಿಸಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಮಕ್ಕಳು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ವಿದ್ಯಾಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪೊನ್ನಚ್ಚನ ಮೋಹನ್, ಕಾರ್ಯದರ್ಶಿ ಕವಿತಾ ಮೋಹನ್ ಉಪಸ್ಥಿತರಿದ್ದರು. ಅತಿಥಿಗಳಾಗಿ ಕಾನೆಹಿತ್ಲು ಸತೀಶ್ ದಂಪತಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.

ಮೂರ್ನಾಡು: ಮೂರ್ನಾಡು ಪದವಿ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ನೆಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮೂರ್ನಾಡಿನ ಸ್ಥಳೀಯ ಮಾರುತಿ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಸಪ್ನ ಸುಬ್ಬಯ್ಯ ಹಾಗೂ ಕಳಂಚೇರಿ ಅರಮೇರಿ ಎಸ್.ಎಂ.ಎಸ್. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕುಸುಮಾ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.

ಸಾಂದೀಪನಿ ಶಾಲೆ: ಅಲ್ಲದೆ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳಾದ ಚಿಂತನ ಜೆ. ಕೊಟ್ಯಾನ್, ನಿಶಾಂತ್ ರೈ ಬಿ.ಜೆ, ಪುರಸ್ಕøತಿ ಜೆ. ಶೆಟ್ಟಿ, ಜೆ.ಎಂ. ದಶರಥ್, ಜಿ.ಎಸ್. ನಿಶಾನ್ ಗೌಡ, ಟಿ.ಸಿ. ಲಿಖಿತ್, ಬಿ.ಪಿ. ರೋಶನ್, ಬಿ.ಆರ್. ಅಕ್ಷತ, ಬಿ.ಎನ್. ದೃವನ್, ಟಿ.ಡಿ. ಕೀರ್ತಿಪ್ರಸಾದ್, ಕೆ.ಎಸ್. ಸಮೀಕ್ಷ, ಎಸ್. ಸ್ಪಟಿಕ, ಪಿ. ಸಾತ್ವಿಕ್, ಹೆಚ್.ಆರ್. ಶಿವಾನಿ, ಕೆ.ಹೆಚ್. ವರ್ಷಿತ, ಎಂ.ಪಿ. ಮಾನ್ಯ, ತೀರ್ಥೇಶ್‍ಗೌಡ, ಎನ್. ರಾಶಿ, ಹೆಚ್. ದೃಪದ್, ಕೆ.ಟಿ. ಮೋಕ್ಷಿತ್, ಎಸ್.ಯು. ಕೃತನ್‍ಗೌಡ, ಜೆ.ವಿ. ಗಗನ್, ಬಿ.ಪಿ. ವಿನ್ಯಾಸ್, ಬಿ.ಬಿ. ಪ್ರಣೀತ್ ಶೆಟ್ಟಿ, ಎಸ್. ಲೋಹಿತ್, ಎಸ್.ಆರ್. ತನ್ವೀಶ್, ವಿ. ಪ್ರಜ್ವಲ್, ಕೆ.ಎಂ. ಶ್ರೇಯಸ್, ಜೆ. ಚಿರಾಗ್, ಬಿ.ಪಿ. ಮೋಹಿತ್, ಹೆಚ್.ಟಿ. ದೀಕ್ಷಿತ್, ಬಿ.ಡಿ. ದೀಕ್ಷಿತ್, ಕೆ.ಪಿ. ಪ್ರೀತಮ್, ಎಂ. ಶ್ವೇತ ಅವರುಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕುಶಾಲನಗರ: ತಮಿಳುನಾಡು ಮಧುರೈಯಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ 5ನೇ ಕರಾಟೆ ಸ್ಪರ್ಧೆಯಲ್ಲಿ ಕುಶಾಲನಗರದ ಕುಫುಕಾನ್ ಶಿಟೋ ರಿಯಾ ಕರಾಟೆ ಸಂಸ್ಥೆಯ ಜಿಲ್ಲೆಯ ಬಾಲಕರು ಮತ್ತು ಬಾಲಕಿಯರು 11 ಚಿನ್ನದ ಪದಕ, 10 ಬೆಳ್ಳಿ ಪದಕ, 5 ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಕಟಾ ಮತ್ತು ಕುಮಿಟೆಯಲ್ಲಿ ಕರಾಟೆ ಸಂಸ್ಥೆಯ ತರಬೇತುದಾರ ಸೆನ್ಸಾಯ್ ಮಹಮ್ಮದ್ ಇಕ್ಬಾಲ್ ಮತ್ತು ಶಿಕ್ಷಕ ಎನ್.ಎನ್. ರಾಹುಲ್ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಕುಶಾಲನಗರದ ಫಾತಿಮಾ ಕಾನ್ವೆಂಟ್‍ನ ಅನುಗ್ರಹ, ಪವನ್, ಯುವರಾಜ್, ಇಂಚರ, ಅನ್ವಿತ, ವಂದನಾರಾಜ್, ಪಿ.ಎಂ. ತನಿಶ್, ಸರಕಾರಿ ಪದವಿಪೂರ್ವ ಕಾಲೇಜಿನ ಎನ್. ಅಫ್ಜಲ್, ಗುಮ್ಮನಕೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂಜುನಾಥ, ಕೊಪ್ಪ ಭಾರತಮಾತ ಸಂಸ್ಥೆಯ ಸ್ವಸ್ತಿಕ್, ಅನುಷ್, ಸಂತೋಷ್ ಮತ್ತು ಕೊಡಗರಹಳ್ಳಿ ಶಾಂತಿನಿಕೇತನ ವಿದ್ಯಾಸಂಸ್ಥೆಯ ಆದಿಲ ಇರ್ಫಾನ್, ವರ್ಧಿನಿ, ಇರ್ಫಾನ್, ಗೌತಮಿ, ವರ್ಷಾ, ಮೋಕ್ಷಿತ್, ಫಿದಾ ಮತ್ತು ಭೌಷತ್ ಅವರುಗಳು ಒಟ್ಟು 26 ಪದಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಶಾಲನಗರ ಕೊಫುಕಾನ್ ಶಿಟೋರಿಯಾ ಕರಾಟೆ ಸಂಸ್ಥೆಯ ಮುಖ್ಯಸ್ಥ ಮಹಮ್ಮದ್ ಇಕ್ಬಾಲ್ ತಿಳಿಸಿದ್ದಾರೆ.

ಸೋಮವಾರಪೇಟೆ: ಸಂವಿಧಾನದತ್ತವಾಗಿ ದೊರಕಿರುವ ಮತದಾನ ಹಕ್ಕು ಅತ್ಯಂತ ಪವಿತ್ರವಾಗಿದ್ದು, ಯುವ ಸಮುದಾಯ ಹಕ್ಕು ಚಲಾವಣೆಯ ಮೂಲಕ ಸಮೃದ್ಧ ಭಾರತವನ್ನು ಕಟ್ಟಬೇಕು ಎಂದು ಇಲ್ಲಿನ ಜೆಎಂಎಫ್‍ಸಿಯ ಹಿರಿಯ ಸಿವಿಲ್ ನ್ಯಾಯಾಧೀಶ ಶಿವಪುತ್ರ ಆರ್. ದಿಂಡಲಕೊಪ್ಪ ಹೇಳಿದರು.

ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ, ವಕೀಲರ ಸಂಘ, ಬಿಟಿಸಿಜಿ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಮಾತನಾಡಿ, ಮತದಾನದ ಮೂಲಕ ಯುವ ಸಮುದಾಯ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಸಂವಿಧಾನ ಕಲ್ಪಿಸಿರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಪೋಕ್ಸೋ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿ ಹೇಳಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಚಂದನ, ಮಣಿಕಂಠ, ಸಿ.ಸಿ.ಸೂರ್ಯ, ಎ.ಈ.ಅನನ್ಯ, ಸಿಂಧು, ಎಸ್.ಪ್ರಾಂತ್ಯ, ಪ್ರವೀಣ್, ಸಮರುದ್ಧೀನ್, ನಿತೀನ್ ಅವರುಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಗೋವಿಂದರಾಜು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಬಿಇಒ ಎಚ್.ಕೆ. ಪಾಂಡು, ವಿದ್ಯಾಸಂಸ್ಥೆಯ ಭಾತ್ಮೀದಾರ ಕೆ.ಎಂ.ಜಗದೀಶ್, ಮುಖ್ಯ ಶಿಕ್ಷಕಿ ಮಿಲ್‍ಫ್ರೆಡ್ ಗೊನ್ಸಾಲ್ವೆಸ್, ಕಾಲೇಜು ಪ್ರಾಂಶುಪಾಲ ಹೆಚ್.ಎಸ್. ಶರಣ್, ವಕೀಲರಾದ ಹೆಚ್.ಎಸ್. ವೆಂಕಟೇಶ್, ಬಿ.ಆರ್.ಸಿ. ಸತೀಶ್‍ಕುಮಾರ್, ಶಾಲಾ ನಾಯಕಿ ಹಂಸಿನಿ ಉಪಸ್ಥಿತರಿದ್ದರು.

ಶನಿವಾರಸಂತೆ: ನಂದಿಗುಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಬಿ. ಮೋಹನ್ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂಶುಪಾಲ ಹೆಚ್.ಎಸ್. ಶರಣ್ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಸಿ.ಜೆ. ಪವನ್ ದೇವಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಕುಸುಮಾ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಮಾಜಿ ಅಧ್ಯಕ್ಷ ಧರ್ಮಾಚಾರಿ, ಸದಸ್ಯರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ದಾನಿ ಸಿ.ಜೆ. ಪವನ್ ದೇವಯ್ಯ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.

ಗೋಣಿಕೊಪ್ಪ ವರದಿ: ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಪದವಿಪೂರ್ವ ಕಾಲೇಜು ವತಿಯಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದಲ್ಲಿ ಪ್ರತಿಭೆಗಳ ಅನಾವರಣ, ವೃತ್ತಿ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಪೆÇೀಷಕರಿಗೆ ಕೌನ್ಸಿಲಿಂಗ್ ವಿಷಯದ ಬಗ್ಗೆ ಇಗ್‍ನೈಟ್- 2020 ಕಾರ್ಯಾಗಾರವನ್ನು ಫೆಬ್ರವರಿ 2 ರಂದು ಕಾಲೇಜು ಆವರಣದಲ್ಲಿ ನಡೆಸಲಾಗುವುದು. ಮೈಸೂರು ಎನ್‍ಐಇ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ನಿತಿನ್ ಗಣಪತಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.