ಕುಶಾಲನಗರ, ಜ. 31: ಕುಶಾಲನಗರದ ಲಯನ್ಸ್ ಕ್ಲಬ್, ಗೌಡ ಸಮಾಜ ಮತ್ತು ಅಂಗಸಂಸ್ಥೆಗಳು ಹಾಗೂ ಮೈಸೂರಿನ ಅಪೆÇೀಲೊ ಬಿಜಿಎಸ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಗೌಡ ಸಮಾಜ ಸಭಾಂಗಣದಲ್ಲಿ ಸಮುದಾಯ ಬಾಂಧವರು ಹಾಗೂ ಸಾರ್ವಜನಿಕರಿಗೆ ಉಚಿತ ಅರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು.
ಅಪೆÇೀಲೊ ಆಸ್ಪತ್ರೆಯ ವೈದ್ಯರಾದ ಡಾ. ಪ್ರಣೀಶ್, ಡಾ. ಸೌಮ್ಯ ಹಾಗೂ ಸ್ಥಳೀಯ ವೈದ್ಯರಾದ ಡಾ. ಕಿಶೋರ್‍ಕುಮಾರ್ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಗೌಡ ಸಮಾಜ, ಪದ್ಮಾವತಿ ಮಹಿಳಾ ಸಮಾಜ, ಗೌಡ ಯುವಕ ಸಂಘ ಸೇರಿದಂತೆ ಲಯನ್ಸ್ ಕ್ಲಬ್ ಸದಸ್ಯರು ಹಾಗೂ ವಿವಿಧೆಡೆಗಳಿಂದ ಜನರು ಆಗಮಿಸಿ ಈ ಶಿಬಿರ ಪ್ರಯೋಜನವನ್ನು ಪಡೆದುಕೊಂಡರು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಕೊಡಗನ ಹರ್ಷ, ಕಾರ್ಯದರ್ಶಿ ಪೆÇನ್ನಚ್ಚನ ಮೋಹನ್, ಗೌಡ ಸಮಾಜ ಅಧ್ಯಕ್ಷ ಕೂರನ ಪ್ರಕಾಶ್, ಕಾರ್ಯದರ್ಶಿ ಎಂ.ಕೆ. ಗಣೇಶ್, ಸಹ ಕಾರ್ಯದರ್ಶಿ ಗಣಪತಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಉತ್ತಪ್ಪ ಇದ್ದರು.