ಸೋಮವಾರಪೇಟೆ, ಜ. 31: ಕಾರ್ಮಿಕರ ಇಲಾಖೆಯಿಂದ ನೀಡಲಾಗುವ ಅಸಂಘಟಿತ ವಲಯದ ಕಾರ್ಮಿಕರಿಗೆ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಪಿಂಚಣಿ ಕಾರ್ಡ್ ವಿತರಿಸಿದರು.

ಕಾರ್ಮಿಕ ಇಲಾಖೆ ವತಿಯಿಂದ ಪಿ.ಎಂ.ಎಸ್.ವೈ.ಎಂ. ಯೋಜನೆಯಡಿ ನೋಂದಾಯಿತರಾದ ಕಾರ್ಮಿಕರಿಗೆ ಪಿಂಚಣಿ ನೋಂದಣಿ ಕಾರ್ಡ್‍ಗಳನ್ನು ತಮ್ಮ ಕಚೇರಿಯಲ್ಲಿ ವಿತರಿಸಿ, ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮಾಯೋಗಿ ಮಾನ್‍ಧನ್ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದಿಂದ ದೊರಕುವ ಹೆಚ್ಚಿನ ಸವಲತ್ತುಗಳನ್ನು ಪಡೆದು ಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭ ಹಿರಿಯ ಕಾರ್ಮಿಕಾಧಿಕಾರಿ ಮಹದೇವಸ್ವಾಮಿ ಹಾಜರಿದ್ದರು.